ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಮ್ಮೆ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಯಾಗಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ರಾಜಸ್ಥಾನ್ ರಾಯಲ್ಸ್ ವಿರುದ್ಧ 19 ರನ್ ಗಳ ಸೋಲನುಭಿಸಿತು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ಸಂಜು ಸಾಮ್ಸನ್ (92) ಅವರ ಅಮೋಘ ಆಟದಿಂದ 217 ರನ್ ಗಳಿಸಿತು.
ಬೃಹತ್ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಪರ ನಾಯಕ ವಿರಾಟ್ ಕೊಹ್ಲಿ (57), ಮಂದೀಪ್ ಸಿಂಗ್ (ಅಜೇಯ47) ರನ್ ಗಳನ್ನು ಹೊರತುಪಡಿಸಿದರೆ ಬೇರೆ ಆಟಗಾರರಿಂದ ನಿರೀಕ್ಷಿತ ಆಟ ಬರಲಿಲ್ಲ. ಅಂತಿಮವಾಗಿ 19 ರನ್ ಗಳಿಂದ ಸೋಲಪ್ಪಿಕೊಂಡಿತು.