ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬಿದ್ದು, ಕಾಂಟೆಕ್ಟ್ ನಂಬರ್ ಕೇಳಿದ ಆ ಪ್ರೇಮಿ…! ಆದರೆ ಗೃಹಿಣಿ ಅವನ ಪ್ರೀತಿಯನ್ನು ನಿರಾಕರಿಸಿ, ಕಾಂಟೆಕ್ಟ್ ನಂಬರ್ ಕೂಡ ಕೊಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಹುಚ್ಚು ಪ್ರೇಮಿ ಆಕೆಯ ಮುಖಕ್ಕೆ ಸಿಗರೇಟ್ ಹೊಗೆಬಿಟ್ಟ…!
ಈ ಘಟನೆ ನಡೆದಿರೋದು ಬೆಂತಳೂರಿನ ಮಲ್ಲೇಶ್ವರಂ ನ ಬ್ರಿಗೇಡ್ ರಸ್ತೆಯ ರೆಗೆನ್ಸಿ ಬಳಿ.
ಮಹಿಳೆಯೊಬ್ಬರ ಹಿಂದೆ ಬಿದ್ದ ಅಪರಿಚಿತ ವ್ಯಕ್ತಿ ಪ್ರೀತ್ಸೆ, ಪ್ರೀತ್ಸೆ ಅಂತ ಹಿಂದೆ ಬಿದ್ದು, ನಾನು ನಿನ್ನ ಇಷ್ಟ ಪಡ್ತಿದ್ದೀನಿ ನಿನ್ನ ನಂಬರ್ ಕೊಡು ಎಂದು ಪೀಡಿಸಿದ್ದಾನೆ. ಆದರೆ ಆಕೆ ಆತನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಮುಖಕ್ಕೆ ಸಿಗರೇಟ್ ಹೊಗೆ ಬಿಟ್ಟಿದ್ದಾನೆ. ಪ್ರೀತಿಸದೇ ಇದ್ದರೆ ಕೊಲೆ ಮಾಡ್ತೀನಿ ಅಂತ ಬೆದರಕೆ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ತಾನು ಮನೆ ಕೆಲಸ ಮಾಡಿ ನಾಯಿಯನ್ನು ಹಿಡಿದುಕೊಂಡು ಪೆಟ್ರೋಲ್ ಬಂಕ್ ಬಳಿ ಹೋದಾಗ ಅದೇ ವ್ಯಕ್ತಿ ತನ್ನನ್ನು ಗುರಾಯಿಸಿ ಪ್ರೀತಿಸುವಂತೆ ಪೀಡಿಸಿದ್ದಾನೆ. ಗಂಡನಿಗೆ ಹೇಳುತ್ತೇನೆ ಎಂದಾಗ ಕೈ ಹಿಡಿದು ಎಳೆದಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.