ಶರಣ್ ಅಭಿನಯದ ರ್ಯಾಂಬೋ 2 ಸಿನಿಮಾದ ಕೆಲಸ ಬಹುತೇಕ ಮುಗಿದಿದೆ. ಸಿನಿಮಾ ಇದೇ ತಿಂಗಳ ಕೊನೆ ಅಥವಾ ಮೇ ಎರಡನೇ ವಾರದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.
ಚಿತ್ರದ ಒಂದು ಐಟಂ ಸಾಂಗ್ ನಲ್ಲಿ ಐಂದ್ರಿತಾ ರೈ ಕಾಣಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ರ್ಯಾಂಬೋ ಚಿತ್ರದ ಹಾಡೊಂದರಲ್ಲಿ ಶ್ರುತಿ ಹರಿಹರನ್ , ಶುಭಾ ಪೂಂಜ, ಸಂಚಿತಾ ಪಡುಕೋಣೆ, ಭಾವನಾ ರಾವ್ ಮತ್ತು ಮಯೂರಿ ಹೆಜ್ಜೆ ಹಾಕಿದ್ದರು. ಈಗ ಪಾರ್ಟ್ 2 ನಲ್ಲಿ ಧಮ್ ಮಾರೋ ಧಮ್ ಹಾಡಿನಲ್ಲಿ ಐಂದ್ರಿತಾ ಸ್ಟೆಪ್ ಹಾಕಿದ್ದಾರೆ.