ಭಾರತದ ಸ್ಟೀಫನ್ ಹಾಕಿಂಗ್ ರನ್ನು ಕಂಡಿದ್ದೀರಾ..? ದೇಹ ಸ್ಪಂದಿಸದಿದ್ದರೂ ಡಾಕ್ಟರೇಟ್ ಪಡೆದ ಸಾಧಕ.!

Date:

ಜೀವನದಲ್ಲಿ ಸೋತ ವ್ಯಕ್ತಿಗೆ ಗೆಲ್ಲುವ ಹಾರಿ ತಿಳಿಯುತ್ತದಂತೆ. ಅದಕ್ಕೆ ಸಾಕ್ಷಿ ಎಂಬಂತೆ ಇಲ್ಲೋರ್ವ ವ್ಯಕ್ತಿ ಕೇವಲ 32ರ ಹರೆಯದಲ್ಲೇ ಡಾಕ್ಟರೇಟ್ ಪದವಿ ಪಡೆದಿದ್ದಾನೆ..! ಅರೇ ಅದರಲ್ಲೇನು ವಿಶೇಷ ಅಂತೀರಾ? ಈ ಹುಡುಗನಿಗೆ ಸೊಂಟದಿಂದ ಕೆಳಗೆ ಸ್ವಾಧೀನವಿಲ್ಲ. ಕಷ್ಟಪಟ್ಟು ಮಾತನಾಡುತ್ತಾನೆ, ಈತನ ಮಾತು ಯಾರಿಗೂ ಸುಲಭವಾಗಿ ಅರ್ಥವೂ ಆಗುವುದಿಲ್ಲ. ಸೆರೆಬ್ರಲ್ ಪಾಲ್ಸಿಯಿರುವ ಹುಡುಗ ಶೇ. 95 ಅಂಗವೈಕಲ್ಯತೆ ಹೊಂದಿದ್ದಾನೆ.
ಯೆಸ್.. ಆಕಾಂಕ್ಷಾ ಗುಪ್ತ ಎಂಬ ಯುವಕ ಇತ್ತೀಚೆಗೆ ಭಾರತದ ಪ್ರಸಿದ್ಧ ವಿಶ್ವವಿದ್ಯಾನಿಲಯ ಎಂದೇ ಖ್ಯಾತಿ ಪಡೆದಿರುವ ಜವಾಹರ್ ಲಾಲ್ ನೆಹರೂ ವಿವಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾನೆ. ಉತ್ತರ ಪ್ರದೇಶದ ಜೌನ್ಪುರ್ ನಿವಾಸಿಯಾದ ಈತ ತನಗೆ ಅಂಗವೈಕಲ್ಯತೆ ಇದೆ ಎಂದು ಸುಮ್ಮನೆ ಕೂರಲಿಲ್ಲ. ಬಾಲ್ಯ ಎಂಬುದು ಅಕ್ಷರಶಃ ನರಕವಾಗಿತ್ತು..! ಆದರೂ ಕಲಿಯಬೇಕೆಂಬ ಉತ್ಸಾಹ ಗುಪ್ತಾನ ಮನದಾಳದಲ್ಲಿತ್ತು. ನಮ್ಮ ದೇಶದಲ್ಲಿ ಯಾರಿಗಾದರೂ ಅಂಗವೈಕಲ್ಯತೆ ಇದ್ದರೆ, ಕಲಿತು ಏನು ಮಾಡುವುದಿದೆ ಎಂಬ ತಾತ್ಸಾರ ಭಾವನೆ ಇದೆ. ಗುಪ್ತಾ ವಿಷಯದಲ್ಲೂ ಕೂಡಾ ಹಲವರು ಹಾಗೆ ಹೇಳಿದ್ದರು. ಆದರೆ ಆತನ ಅಮ್ಮನಿಗೆ ವಿದ್ಯಾಭ್ಯಾಸ ಕೊಡಿಸಬೇಕೆಂಬ ಹಠ. ಹಾಗಾಗಿಯೇ ಗುಪ್ತಾನನ್ನು ಶಾಲೆಗೆ ಸೇರಿಸಲಾಯಿತು. ಅದೃಷ್ಟಕ್ಕೆ ಮೀರಾ ಸಾಹು ಎಂಬುವವರು ಶಾಲೆಯಲ್ಲಿ ಅಡ್ಮಿಷನ್ ಕೊಟ್ಟರು. ಅಲ್ಲಿ ಅದ್ಭುತ ಫಲಿತಾಂಶ ಬಂತು. ಶಾಲೆ ಮುಗಿಸಿ ಕಾಲೇಜಿಗೆ ಸೇರಿದ. ಜೌನ್ ಪುರ್ ನಲ್ಲಿರುವ ಉಮಾನಾಥ್ ಸಿಂಗ್ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಗೆ ಸೇರಿ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿ.ಟೆಕ್ ಮಾಡಿದ. ಆ ವೇಳೆ ಮಹಾಜನ್ ಎಂಬ ರಿಕ್ಷಾವಾಲ ಗುಪ್ತಾನ ನೆರವಿಗೆ ಬಂದರು. ಅವರು ಗುಪ್ತಾನನ್ನು ಕಾಲೇಜಿಗೆ ಕರೆದುಕೊಂಡು ಹೋಗಿ, ಕರೆದುಕೊಂಡು ಬರುವ ಕೆಲಸ ಮಾಡುತ್ತಿದ್ದರು.


ಇದಾದನಂತರ ಡಾಕ್ಟರೇಟ್ ಮಾಡಬೇಕೆಂದು ಅನಿಸಿತು. ಹಾಗೆ ಬ್ರೈನ್ ಕಂಪ್ಯೂಟರ್ ಇಂಟರ್ಫೇಸ್ ಎಂಬ ವಿಷಯದ ಬಗ್ಗೆ ಥೀಸಿಸ್ ಬರೆದ. ಆತನ ಸಾಧನೆಯನು ಗುರುತಿಸಿ ಇಂದು ಜವಾಹರ್ ಲಾಲ್ ನೆಹರೂ ವಿವಿಯಿಂದ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇನ್ನಷ್ಟು ಸಾಧನೆ ಮಾಡಲು ಪ್ರೇರೇಪಿಸಿದೆ.
ಅಂಗವೈಕಲ್ಯತೆ ಬಂದರೆ ಸಾಕು ಮನೆಯಲ್ಲೇ ಕೂತು ಕೊರಗುವ ಅದೆಷ್ಟೋ ಮಂದಿಗೆ, ಅಂಗವೈಕಲ್ಯವಿದ್ದರೂ ಅದನ್ನು ಮೀರಿ ಡಾಕ್ಟರೇಟ್ ಪಡೆದ ಗುಪ್ತಾ ಮಾದರಿಯಾಗುತ್ತಾರೆ. ಅವರಿಗೆ ಹಾಗೂ ಅವರ ಸಾಧನೆಗೆ ನಮ್ಮ ಸಲಾಂ.

Share post:

Subscribe

spot_imgspot_img

Popular

More like this
Related

ಯುಟಿ ಖಾದರ್ ವಿರುದ್ದ ಭ್ರಷ್ಟಾಚಾರ ಆರೋಪ: ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಯಲಿ ಎಂದ ವಿಶ್ವೇಶ್ವರ ಹೆಗಡೆ ಕಾಗೇರಿ

ಯುಟಿ ಖಾದರ್ ವಿರುದ್ದ ಭ್ರಷ್ಟಾಚಾರ ಆರೋಪ: ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಯಲಿ...

ಯೆಲ್ಲೋ ಮೆಟ್ರೋಗೆ ಹೊಸ ರೈಲು ಸೇರ್ಪಡೆ: ನಾಳೆಯಿಂದ 15 ನಿಮಿಷಕ್ಕೊಮ್ಮೆ ಸಂಚಾರ!

ಯೆಲ್ಲೋ ಮೆಟ್ರೋಗೆ ಹೊಸ ರೈಲು ಸೇರ್ಪಡೆ: ನಾಳೆಯಿಂದ 15 ನಿಮಿಷಕ್ಕೊಮ್ಮೆ ಸಂಚಾರ! ಬೆಂಗಳೂರು:...

ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ ನ.3 ರಂದು ದೋಷಾರೋಪ

ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ...

ಮೋಂಥಾ ಚಂಡಮಾರುತ: ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ಭಾರೀ ಮಳೆ

ಮೋಂಥಾ ಚಂಡಮಾರುತ: ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ಭಾರೀ ಮಳೆ ಬೆಂಗಳೂರು:...