ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ರಂಗು ಕಾವೇರ ತೊಡಗಿದೆ. ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅಧಿಕಾರ ಗದ್ದುಗೆ ಏರುವ ತವಕದಲ್ಲಿವೆ ರಾಜಕೀಯ ಪಕ್ಷಗಳು. ದಿನದಿಂದ ದಿನಕ್ಕೆ ಚುನಾವಣಾ ಸಿದ್ಧತೆ ಜೋರಾಗಿ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಶಾಸಕರಿಗಂತೂ ಮತ್ತೆ ಸ್ಥಾನ ವಿಧಾಸಭೆ ಪ್ರವೇಶಿಸಲೇ ಬೇಕೆಂಬ ಹಠ ದೊಡ್ಡದಿದೆ.ಮತ್ತೊಂದು ಐದು ವರ್ಷ ಅಧಿಕಾದಲ್ಲಿರಬೇಕೆಂಬ ಹಾಲಿ ಶಾಸಕರ ಗುರಿಯಂತೆ, ಇವರನ್ನು ಶತಾಯಗತಾಯ ಸೋಲಿಸಿ ತಾವು ಶಾಸಕರಾಗಬೇಕೆಂಬ ತುಡಿದ ಪ್ರತಿ ಸ್ಪರ್ಧಿಗಳದ್ದು.
ಹೀಗಿರುವಾಗ ನಾವು ಹಾಲಿ ಶಾಸಕರು ತಮ್ಮ ಅಧಿಕಾರ ಅವಧಿಯಲ್ಲಿ, ತಮ್ಮ ಕ್ಷೇತ್ರಕ್ಕೆ, ಜನತೆಗೆ ಏನ್ ಮಾಡಿದ್ದಾರೆ ಎಂಬುದನ್ನು ಗಮನಸಿಬೇಕಾಗಿದೆ. ಪ್ರಮುಖವಾಗಿ ಬೆಂಗಳೂರಿನ 28 ವಿಧಾಸಭಾ ಕ್ಷೇತ್ರಗಳಲ್ಲಿ ಏನೆಲ್ಲಾ ಅಭಿವೃದ್ಧಿಯಾಗಿದೆ ಎಂಬುದರ ಕುರಿತು ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡುತ್ತಿದ್ದು, ಇಂದಿನಿಂದಲೇ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳತ್ತ ಬೆಳಕು ಚೆಲ್ಲಲಿದ್ದೇವೆ.