ಯಾದಗಿರಿ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಮಗ ನಾಮಪತ್ರ ಸಲ್ಲಿಸಿದ ಅರ್ಧಗಂಟೆಯಲ್ಲಿ ತಾಯಿ ನಾಮಪತ್ರ ಸಲ್ಲಿಸಿದ್ದಾರೆ….!
ಮಾಜಿ ಸಚಿವ ರಾಜುಗೌಡ ನರಸಿಂಹ ನಾಯಕ ಸುರಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಅರ್ಧಗಂಟೆಯಲ್ಲಿ ಅವರ ತಾಯಿ ತಿಮ್ಮಮ್ಮಾ ಶಂಭನಗೌಡ ನಾಮಪತ್ರ ಸಲ್ಲಿಸಿದರು. ಒಂದು ವೇಳೆ ಮಗನ ಅರ್ಜಿ ತಿರಸ್ಕೃತವಾದರೆ ತಾಯಿಗೆ ಅವಕಾಶ ಸಿಗಲೆಂದು ಈ ರೀತಿ ನಾಮಮತ್ರ ಸಲ್ಲಿಸಲಾಗಿದೆ.








