ಇಂಧನ ಸಚಿವ , ಕನಕಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಶಿವಕುಮಾರ್ ಅವರು ತಮ್ಮ ಆಸ್ತಿ ವಿವರದ ಅಫಿಡವಿಟ್ ಸಲ್ಲಿಸಿದ್ದಾರೆ. ಕಳೆದ ಚುನಾವಣೆ, ಅಂದರೆ 2013ರಿಂದ ಈ ವರಗೆ 5ವರ್ಷಗಳಲ್ಲಿ ಇವರ ಆಸ್ತಿ ಡಬಲ್ ಆಗಿದೆ. ಇದೀಗ ಇವರ ಆಸ್ತಿ 600ಕೋಟಿಗೂ ಹೆಚ್ಚಿದೆ.

ಕಳೆದ ಚುನಾವಣಾ ವೇಳೆಯಲ್ಲಿ 251 ಕೋಟಿ ರೂ ಆಸ್ತಿ ಘೋಷಿಸಿದ್ದರು. ಈಗ ಸ್ಥಿರಾಸ್ತಿ 548 ಕೋಟಿ 85 ಲಕ್ಷದ 25 ಸಾವಿರದ 592 ರೂ ಇದ್ದು, ಚರಾಸ್ತಿ ಮೌಲ್ಯ 70ಕೋಟಿ 94 ಲಕ್ಷದ 84 ಸಾವಿರದ 974 ರೂ ನಷ್ಟಿದೆ.ಬ್ಯಾಂಕ್ ಸಾಲ 101 ಕೋಟಿ 77ಲಕ್ಷದ 82 ಸಾವಿರದ 200 ರೂ ಇದೆ.







