ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ವಿರುದ್ಧ ‘ಮಹಾಭಿಯೋಗ’ (ವಾಗ್ದಂಡನೆ) ನಿಲುವಳಿ ಮಂಡಿಸಲು ಕಾಂಗ್ರೆಸ್ ಮತ್ತು ಇತರೆ 6 ಪ್ರತಿ ಪಕ್ಷಗಳು ತೀರ್ಮಾನಿಸಿವೆ. ಈ ಸಂಬಂಧ ರಾಜ್ಯಸಭೆ ಸಭಾಪತಿಗಳಿಗೆ ಶುಕ್ರವಾರ ನೋಟಿಸ್ ನೀಡಿದೆ.

ನ್ಯಾ| ದೀಪಕ್ ಮಿಶ್ರಾ ವಿರುದ್ಧ 5 ಆರೋಪ ಹೊರಿಸಿರುವ ಪ್ರತಿಪಕ್ಷಗಳು, ಅವರ ವಿರುದ್ಧ ‘ದುರ್ನಡತೆ’ ಹಾಗೂ ‘ಅಧಿಕಾರ ದುರ್ಬಳಕೆ’ ಆರೋಪ ಮಾಡಿವೆ.
ಇದರೊಂದಿಗೆ ನ್ಯಾಯಾಂಗ ಹಾಗೂ ರಾಜಕೀಯ ಪಕ್ಷಗಳ ನಡುವೆ ಇದೇ ಮೊದಲ ಬಾರಿಗೆ ಎಂದೂ ಕೇಳಿರದ ಸಂಘರ್ಷ ಏರ್ಪಟ್ಟಂತಾಗಿದೆ.
ಗ್ಯಾಂಗ್‌ಸ್ಟರ್ ಸೊಹ್ರಾಬುದ್ದೀನ್ ಶೇಖ್ ಅನುಮಾನಾಸ್ಪದ ಎನ್ ಕೌಂಟರ್ ಪ್ರಕರಣದ ನ್ಯಾಯಾಧೀಶ ಬಿ.ಎಚ್. ಲೋಯಾ ಸಾವಿನ ತನಿಖೆಗೆ ಆದೇಶಿಸಲು ನ್ಯಾ| ಮಿಶ್ರಾ ನಿರಾಕರಿಸಿದ ಬೆನ್ನಲ್ಲೇ ಹೀಗಾಗಿದೆ.







