1. ಮಾನನಷ್ಟ ಮೊಕದ್ದಮೆ ಹಿನ್ನೆಲೆ : ಕೇಜ್ರಿವಾಲ್ ಗೆ ನೋಟಿಸ್
ದಿಲ್ಲಿ ಜಿಲ್ಲಾ ಕ್ರಿಕೆಟ್ ಅಸೋಷಿಯೇಷನ್ ಅಕ್ರಮದ ಆರೋಪ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಆಪ್ ನ ಆರು ಮಂದಿ ನಾಯಕರ ಮೇಲೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸಲ್ಲಿಸಿರೋ `ಮಾನನಷ್ಟ ಮೊಕದ್ದಮೆ’ಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಜೇಟ್ಲಿ ಆಪ್ ನಾಯಕರ ವಿರುದ್ಧ 10 ಕೋಟಿ ರೂ ಮಾನನಷ್ಟ ಮೊಕದ್ದಮೆಯನ್ನು ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್, ಕುಮಾರ್ ವಿಶ್ವಾಸ್, ಆಸುತೋಷ್, ಸಂಜಯ್ ಸಿಂಗ್, ರಾಘವ್ ಚಡ್ಡಾ ಮತ್ತು ದೀಪಕ್ ಬಾಜಪೇಯ್ ಅವರಿಗೆ ನೋಟಿಸ್ ನೀಡಿರೋ ದಿಲ್ಲಿ ಹೈಕೋರ್ಟ್ ಇನ್ನೆರಡು ವಾರದಲ್ಲಿ ಈ ಕುರಿತು ಉತ್ತರಿಸುವಂತೆ ಸೂಚಿಸಿದೆ.
2. ಆರ್.ಟಿ.ಇ ಅಡಿಯಲ್ಲಿ ಎಲ್.ಕೆ.ಜಿ, ಯುಕೆಜಿ ಪ್ರವೇಶಕ್ಕೆ ಮಧ್ಯಂತರ ತಡೆ..!
2015 ಮತ್ತು 16 ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಆರ್ಟಿಇ ಅಡಿಯಲ್ಲಿ ಎಲ್ಕೆಜಿ, ಯುಕೆಜಿ ಪ್ರವೇಶಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ತಡಯಾಜ್ಞೆ ವಿಧಿಸಿದೆ.
1 ರಿಂದ 8 ನೇ ತರಗತಿಯವರಗೆ ಉಚಿತ ಶಿಕ್ಷಣ ನೀಡಬೇಕೆಂದು ರಾಜ್ಯ ಸರ್ಕಾರ ಕಾನೂನು ರೂಪಿಸಿರುವುದಲ್ಲದೇ ಎಲ್ಕೆಜಿ, ಯುಕೆಜಿಗೂ ಆರ್ಟಿಇ ಅಡಿ ಉಚಿತ ಪ್ರವೇಶ ನೀಡಬೇಕೆಂದು ಸೂಚಿಸಿತ್ತು. ಇದನ್ನು ವಿರೋಧಿಸಿ ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟ ಹೈಕೋರ್ಟ್ ನಲ್ಲಿ ರಿಟ್ ಹಾಕಿದ್ದವು.
3. ಡಿಡಿಸಿಎ ಪ್ರಕರಣ ಜೇಟ್ಲಿ ಪರ ಮೋದಿ ಬ್ಯಾಟಿಂಗ್..!
ದೆಹಲಿ ಜಿಲ್ಲಾ ಕ್ರಿಕೆಟ್ ಅಸೋಷಿಯೇಷನ್ (ಡಿಡಿಸಿಎ) ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಭ್ರಷ್ಟಾಚಾರ ಎಸಗಿದ್ದಾರೆಂಬ ಆರೋಪಕ್ಕೆ ತುತ್ತಾಗಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪರ ಮೋದು ಬ್ಯಾಟಿಂಗ್ ನಡೆಸಿ, ಜೇಟ್ಲಿ ಆರೋಪ ಮುಕ್ತರಾಗಲಿದ್ದಾರೆಂದು ಹೇಳಿದರು.
ಹವಾಲಾ ಹಗರಣಕ್ಕೆ ಸಂಬಂಧಿಸಿದಂತೆ ಎಲ್.ಕೆ ಅಡ್ವಾಣಿ ಆರೋಪಮುಕ್ತರಾದಂತೆ ಜೇಟ್ಲಿ ಕೂಡ ಆರೋಪ ಮುಕ್ತರಾಗಲಿದ್ದಾರೆಂದು ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಮೋದಿ ಹೇಳಿದರು. ಜೇಟ್ಲಿ ಡಿಡಿಸಿಎ ಅಧ್ಯಕ್ಷರಾಗಿದ್ದ ಕಾಲದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಟೀಕೆಗೆ ಪ್ರತಿಕ್ರಿಯಿಸಿರುವ ಮೋದಿ, `ಸರ್ಕಾರಕ್ಕೆ ಅಪಖ್ಯಾತಿ ತರುವ ನಿಟ್ಟಿನಲ್ಲಿ ಸುಳ್ಳು ಆರೋಪ ಮಾಡಲಾಗ್ತಾ ಇದೆ ಎಂದು ಆರೋಪಿಸಿದರು.
4. ಎಲ್ಲಾ ಧರ್ಮಕ್ಕೂ ಮೌಢ್ಯ ನಿಷೇಧ ಕಾಯ್ದೆ ಅನ್ವಯ..!
ಮೂಡನಮಭಿಕೆ ಕಾಯಿದೆಯೂ ಒಂದೇ ಧರ್ಮವನ್ನು ಗುರಿಯಾಗಿಸಿದೆ ಎಂಬ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಜನರ ನಂಬಿಕೆಗಳಿಗೆ ಅಡ್ಡಿಯಾಗದ ಹಾಗೂ ಎಲ್ಲಾ ಧರ್ಮಗಳಿಗೂ ಅನ್ವಯವಾಗುವ ಮೂಢನಂಬಿಕೆ ಕಾಯ್ದೆ ರೂಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ವಿಧಾನಸೌಧದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ ಕಾನೂನು ಸಚಿವ ಟಿ. ಬಿ ಜಯಚಂದ್ರ ಸರಕಾರ ಮಾಡುವ ಮೂಡನಂಬಿಕೆ ಕಾಯ್ದೆ ಯಾವುದೇ ಧರ್ಮದ ಪರ ಅಥವಾ ವಿರುದ್ದ ರದು, ಅದು ಎಲ್ಲಾ ಧರ್ಮಕ್ಕೂ ಅನ್ವಯವಾಗುತ್ತದೆ. ಶೋಷಣೆಗೊಳಗಾದವರ ಪರವಾಗಿರುತ್ತೆ ಎಂದು ಹೇಳಿದರು.
5. ಮುಂಬೈ ಚಿತ್ರೋತ್ಸವದಲ್ಲಿ `ಮರಣ ದಂಡನೆ’
ಬರಗೂರು ರಾಮಚಂದ್ರಪ್ಪರವರ “ಮರಣ ದಂಡನೆ” ಸಿನಿಮಾ ಡಿಸೆಂಬರ್ 24 ರಿಂದ 31ರವರೆಗೆ ನಡೆಯಲಿರುವ 14 ನೇ ಥರ್ಡ್ ಐ ಏಷ್ಯನ್ ಫಿಲ್ಮ್ ಫೆಸ್ಟಿಗೆ ಆಯ್ಕೆಯಾಗಿದ್ದು 31ರಂದು ಸಂಜೆ ನಾಲ್ಕುಗಂಟೆಗೆ ಪ್ರದರ್ಶನವಾಗಲಿದೆ.
ಜಾತಿ ಮತ ಧರ್ಮಗಳನ್ನು ಮೀರಿದ ಮನೋಧರ್ಮವನ್ನು ಸಿನಿಮಾ ಪ್ರತಿಬಿಂಬಿಸುತ್ತದೆ. ಜೈಲಿನಲ್ಲಿ ಅಪರಾಧಿಗಳನ್ನು ಗಲ್ಲಿಗೇರಿಸುತ್ತಿದ್ದ ವ್ಯಕ್ತಿಯೇ ಗಲ್ಲಿಗೇರ ಬೇಕಾದ ಸಂದರ್ಭದ ಸೂಕ್ಷ್ಮಗಳನ್ನು ಹಿಡಿದಿಡುವ ಈ ಸಿನಿಮಾವನ್ನು ಬರಗೂರರು ಮಾಡಿ ವರ್ಷ ಕಳೆದಿದೆ. ಚಿತ್ರವನ್ನು ಹಾಲಪ್ಪ ಕ್ರಿಯೇಷನ್ಸ್ ನಿರ್ಮಿಸಿದ್ದು, ಹಂಸಲೇಖರ ಸಂಗೀತ, ನಾಗರಾಜ್ ಅದವಾನಿ ಛಾಯಾಗ್ರಹಣ ವಿದೆ,
6. ವರ್ಷಗಳಲ್ಲೇ ಕಚ್ಚಾ ತೈಲ ಬೆಲೆ ದಾಖಲೆ ಕುಸಿತ
ಜಾಗತಿಕ ತೈಲ ಮಾರುಕಟ್ಟೆಗೆ ಹರಿದುಬರುತ್ತಿರುವ ಸರಬರಾಜು ಪ್ರಮಾಣದ ನಿರಂತರ ಏರಿಕೆಯಿಂದಾಗಿ ಕಚ್ಛಾ ತೈಲ ದರ 11 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇರಾನ್, ಅಮೇರಿಕ ಹಾಗೂ ಲಿಬಿಯಾಗಳಿಂದ ಭಾರೀ ಪ್ರಮಾಣದ ಕಚ್ಛಾ ತೈಲ ಮಾರುಕಟ್ಟೆ ಪ್ರವೇಶಕ್ಕೆ ಸಿದ್ಧವಾಗಿದ್ದು, ಅದಕ್ಕೂ ಮುನ್ನವೇ ತೈಲ ಬೆಲೆ ಜಾಗತಿಕ ಮಾರುಕಟ್ಟೆ ಯಲ್ಲಿ ಭಾರೀ ಕುಸಿತ ದಾಖಲಿಸಿದೆ. ಬ್ರೆಂಟ್ ತೈಲ ಬೆಲೆ ಶೇ.2ರಷ್ಟು ಕುಸಿತ ಕಂಡಿದ್ದು, ಬ್ಯಾರಲ್ಗೆ 36.05 ಡಾಲರ್ಗೆ ಕುಸಿದಿದೆ. ಇದು 2004ರ ಜುಲೈನಿಂದ ಈವರೆಗಿನ ಅತ್ಯಂತ ಕನಿಷ್ಠ ದರ.
7. ಹೊತ್ತಿ ಉರಿದ ವಿಮಾನ: 10 ಸೈನಿಕರ ದುರ್ಮರಣ
ಗಡಿಭಾಗಕ್ಕೆ ಎಂಜಿನಿಯರ್ ಗಳನ್ನು ಕರೆದೊಯ್ಯುತ್ತಿದ್ದ ಬಿಎಸ್ಎಫ್ ವಿಮಾನ ಹೊತ್ತಿ ಉರಿದು 10 ಮಂದಿ ಸಾವನ್ನಪ್ಪಿರುವ ಘಟನೆ ದೆಹಲಿಯ ದ್ವಾರಕಾದಲ್ಲಿ ಸಂಭವಿಸಿದೆ.
ಸೂಪರ್ ಕಿಂಗ್ ಹೆಸರಿನ ಬಿಎಸ್ ಎಫ್ ವಿಮಾನ ದೆಹಲಿಯಿಂದ ರಾಂಚಿಗೆ ತೆರಳುತ್ತಿತ್ತು. ವಿಮಾನ ನಿಲ್ದಾಣದಿಂದ ಟೇಕಾಫ್ ಆದ 5 ನಿಮಿಷದಲ್ಲೇ ವಿಮಾನ ನಿಲ್ದಾಣದ ಗೋಡೆಗೆ ಡಿಕ್ಕಿ ಹೊಡೆದ ಸೂಪರ್ ಕಿಂಗ್ ಲಘು ವಿಮಾನ ಸಂಪೂರ್ಣ ಹೊತ್ತಿ ಉರಿದಿದೆ.
8. ಅಮೆರಿಕದಿಂದ 34 ಭಾರತೀಯ ವಿದ್ಯಾರ್ಥಿಗಳ ಗಡಿಪಾರು..!
ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯುವ ಆಸೆಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಬಂದಿಳಿದ 14 ಮಂದಿ ಭಾರತೀಯ ವಿದ್ಯಾಥರ್ಿಗಳನ್ನು ಎಫ್.ಬಿ.ಐ ಅಧಿಕಾರಿಗಳು ಸೆಲ್ ನಲ್ಲಿ ಕೂಡಿ ಹಾಕಿ ಸುಮಾರು 15 ತಾಸು ಕಾಲ ಪ್ರಶ್ನಿಸಿ ಬಳಿಕ ಅವರನ್ನು ಭಾರತಕ್ಕೆ ಗಡೀಪಾರು ಮಾಡಿರುವ ಘಟನೆ ವರದಿಯಾಗಿದೆ. ಇದೇ ವೇಳೆ ಅಮೆರಿಕದ ಕ್ಯಾಲಿಫೋರ್ನಿಯದ ಸ್ಯಾನ್ ಓಸೆಯಲ್ಲಿರುವ ಸಿಲಿಕಾನ್ ವಿಶ್ವವಿದ್ಯಾಲಯ ಮತ್ತು ಫ್ರೆಮಾಂಟ್ ನ ನಾರ್ಥ್ ವೆಸ್ಟರ್ನ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಕೈಗೊಳ್ಳಲು ಬಯಸಿ ಹೈದರಾಬಾದ್ ನಲ್ಲಿ ಅಮೆರಿಕಕ್ಕೆ ಹೋಗುವ ಏರ್ ಇಂಡಿಯಾ ವಿಮಾನ ಹತ್ತಲು ಮುಂದಾಗಿದ್ದ 19 ಮಂದಿ ವಿದ್ಯಾರ್ಥಿಗಳನ್ನು ವಿಮಾನ ಹತ್ತದಂತೆ ತಡೆದು ವಾಪಾಸು ಕಳಿಸಿದ ವಿದ್ಯಮಾನವೂ ನಡೆದಿದ.
9. ಅಂತರಾಷ್ಟ್ರೀಯ ಕ್ರಿಕೆಟ್ ಗೆ ಮೆಕ್ಲಮ್ ವಿದಾಯ
ವಿಶ್ವಪ್ರಸಿದ್ಧ ಕ್ರಿಕೆಟಿಗ ಹಾಗೂ ನ್ಯೂಜಿಲೆಂಡ್ ತಂಡದ ನಾಯಕ ಬ್ರೆಂಡನ್ ಮೆಕ್ಲಮ್ 2016ರ ಫೆವ್ರುವರಿಯಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಸರಣಿ ಬಳಿಕ ನಿವೃತ್ತಿ ನೀಡುತ್ತಿರುವುದಾಗಿ ಘೋಷಿಸಿದ್ದಾರೆ. ಇನ್ನು 34ರ ಹರೆಯದ ಮೆಕಲಂರ ಈ ನಿರ್ಧಾರದಿಂದಾಗಿ ಭಾರತದಲ್ಲಿ ನಡೆಯಲಿರುವ ವಿಶ್ವ ಟಿ-20 ವಿಶ್ವಕಪ್ ಗೆ ಅವರನ್ನು ಪರಿಗಣಿಸುವುದಿಲ್ಲ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ಖಚಿತಪಡಿಸಿದೆ.
10. ಏಳು ಜನ ಕಿರಾತಕರಿಗೆ ಮರಣದಂಡನೆ ಶಿಕ್ಷೆ
ಫೆಬ್ರವರಿಯಲ್ಲಿ ನೇಪಾಳ ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿ, ನಂತರ ಕೊಲೆ ಮಾಡಿದ್ದ ಏಳು ಮಂದಿ ಕಿರಾತಕರಿಗೆ ಹರಿಯಾಣದ ಸ್ಥಳೀಯ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ತೀಪರ್ು ನೀಡಿದೆ. ಅತ್ಯಾಚಾರ ನಡೆಸುವವರು ಯಾರೇ ಆಗಲಿ, ಅಂತಹ ಕಾಮುಕರಿಗೆ ಮರಣದಂಡನೆ ವಿಧಿಸಬೇಕೆಂಬ ಕೂಗು ಕೇಳಿ ಬಂದಿರುವ ಸಂದರ್ಭದಲ್ಲಿ ನ್ಯಾಯಾಲಯದ ಈ ತೀರ್ಪು ಭಾರೀ ಮಹತ್ವ ಪಡೆದುಕೊಂಡಿದೆ. ಹರ್ಯಾಣದ ರೋಹ್ಟಕ್ ಜಿಲ್ಲೆಯ ಪದಂಸಿಂಗ್(36), ಪವನ್ಸಿಂಗ್(26), ಮನ್ವೀರ್ ಸಿಂಗ್(21), ಸುನಿಲ್ ಕುಮಾರ್(24), ಸರ್ವರ್ ಕುಮಾರ್(30), ಸುನೀಲ್ಕುಮಾರ್(37), ರಾಜೇಶ್ ಕುಮಾರ್(21) ಎಂಬ ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ.