ಹಾವಿಗೂ ಕಪ್ಪೆಗೂ ಸ್ನೇಹವಾದರೆ ಹೇಗಿರುತ್ತೆ ಗೊತ್ತಾ..? ರವಿ, ಕವಿ ಕಾಣದ್ದು ಕ್ಯಾಮರಾ ಕಣ್ಣು ಕಂಡಿತು..!

0
55

ನಮ್ಮ ಪ್ರಕೃತಿಯೇ ಹಾಗೆ ಚಿತ್ರವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗುತ್ತದೆ. ಆದರೆ ಇಲ್ಲೊಂದು ಅಚ್ಚರಿಯ ಘಟನೆ ನಡೆದಿದೆ. ಅದೇನೆಂದರೆ ಹಸಿರು ಬಣ್ಣದ ಹಾವೊಂದು ಕಪ್ಪೆಯ ಜೊತೆಗೆ ಸ್ನೇಹ ಬೆಳೆಸಿದೆ. ಅದೂ ಅಲ್ಲದೇ ಅದರ ಜೊತೆ ಕಾಲ ಕಳೆಯುತ್ತಿದೆ. ಅಂತಹ ಅಪರೂಪದ ಹಾಗೂ ಅಚ್ಚರಿಯ ಕ್ಷಣ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.

PAY-frog-1

PAY-frog-3
ಹೌದು.. ಕಪ್ಪೆಗೂ ಹಾವಿಗೂ ಅದ್ಯಾವ ಜನ್ಮದ ವಿರೋಧವೋ ಏನೋ ಗೊತ್ತಿಲ್ಲ. ಕಪ್ಪೆಯನ್ನು ಕಂಡ ಕೂಡಲೇ ಹಾವು ಅದನ್ನು ನುಂಗಿಬಿಡುತ್ತವೆ. ಇನ್ನೂ ಕೆಲ ಅಚ್ಚರಿಯ ಸಮಯದಲ್ಲಿ ಕಪ್ಪೆಗಳೇ ಹಾವನ್ನು ನುಂಗಿದ ಉದಾಹರಣೆಯೂ ಇದೆ. ಆದರೆ ಈ ಎರಡೂ ವಿರೋಧಿಗಳು ಪರಸ್ಪರ ಸ್ನೇಹ ಬೆಳೆಸಿದ ಘಟನೆ ಇಂಡೋನೇಷ್ಯಾದ ಝೂ ಒಂದರಲ್ಲಿ ನಡೆದಿದೆ..! ಅದನ್ನು ಫಾಹ್ಮಿಬ್ಸ್ ಎಂಬುವವರು ಸೆರೆಹಿಡಿದಿದ್ದಾರೆ.
ಈ ಎರಡೂ ಪ್ರಾಣಿಗಳು ಸ್ನೇಹ ಬೆಳೆಸಲೂ ಒಂದು ಕಾರಣವಿದೆ. ಅದೇನೆಂದರೆ ಇವೆರಡೂ ಕೂಡಾ ಒಂದೇ ದಿನ ಕೆಲವು ಕ್ಷಣಗಳ ಅಂತರದಲ್ಲಿ ಹಾಗೂ ಒಂದೇ ವರ್ಣವನ್ನು ಹೊಂದುವ ಮೂಲಕ ಜನಿಸಿವೆ. ಆದ್ದರಿಂದ ಇವುಗಳು ಜೊತೆ ಜೊತೆಯಾಗಿಯೇ ಬೆಳೆದಿವೆ. ಸ್ನೇಹಿರಂತೆ ಬದುಕುತ್ತಿವೆ.
ಕೆಲ ಜಾತಿಯ ಹಾವುಗಳೂ ಕಪ್ಪೆಯನ್ನು ತಿನ್ನುವುದಿಲ್ಲವಂತೆ, ಅದೇ ಕಾರಣಕ್ಕೆ ಕಪ್ಪೆ ಮತ್ತು ಹಾವುಗಳ ಮಧ್ಯೆ ಸ್ನೇಹ ಬೆಸೆದುಕೊಂಡಿರಬೇಕು ಎನ್ನುವವರೂ ಇದ್ದಾರೆ. ಏನೇ ಆಗಲಿ ಕಪ್ಪೆ ಮತ್ತು ಹಾವಿನ ಸ್ನೇಹ ಪ್ರತಿಯೊಬ್ಬರಿಗೂ ಅಚ್ಚರಿ ತಂದಿದೆ. ಅಲ್ಲದೇ ಇದು ಇಂಡೀನೇಷ್ಯಾದ ಝೂಗೆ ಹೆಚ್ಚಿನ ಜನರನ್ನ ಸೆಳೆಯಲು ಕಾರಣವಾಗಿದೆ..!

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!

ಈ ಗೋಡೆಗಳ ಮೇಲೆ ಬಟ್ಟೆ ಇಲ್ಲದವರಿಗೆ ಬಟ್ಟೆ ಸಿಗುತ್ತೆ..!

ಇವರು ವಿಶ್ವ ಸುತ್ತಿ ದುಡ್ಡು ಮಾಡಿದ್ರು..! ಕೆಲಸ ಬಿಟ್ಟು, ಜಗತ್ತನ್ನು ಸುತ್ತಿ ದುಡ್ಡು ಮಾಡಿದ್ದು ಹೇಗೆ..?

ಸಾಮಾಜಿಕ ಜಾಲತಾಣಗಳಲ್ಲಿ ಇವರ ಒಂದು ಪೋಸ್ಟ್ ಮೌಲ್ಯ 8289993.75 -19898985.00 ರೂಪಾಯಿಗಳು..!

78 ವರ್ಷದ ಅಜ್ಜಿಯನ್ನು ರಕ್ಷಿಸಿದ 8ರ ಹುಡುಗಿ..! ಕಾಡಿನ ಮಧ್ಯೆ 4.5 ಕಿಮೀ ನಡೆದಿದ್ದಳಂತೆ ಆ ಪುಟ್ಟ ಬಾಲೆ..!

ರಷ್ಯಾದಲ್ಲಿ ನಡೆಯಿತು ಕೂದಲಿಗಾಗಿ 8 ಕೊಲೆ..! ಕೂದಲಿನ ವಿಷಯಕ್ಕೆ ಪತ್ನಿ, ಮಕ್ಕಳು, ತಾಯಿಯನ್ನೇ ಕೊಂದ..!

ಒಂಟೆಗೆ ಮುತ್ತಿಕ್ಕಿದಳು ಆತ ಡೈವೋರ್ಸ್ ಕೊಟ್ಟ..! ಇದು ಒಂ(ಟೆ)ದು ಮುತ್ತಿನ ಕಥೆ..!

ಕೂಲಿಯ ಮಗ ಇವತ್ತು 100 ಕೋಟಿ ಒಡೆಯ..! ಆರನೇ ಕ್ಲಾಸ್ ಫೇಲ್ ಆಗಿದ್ದ ಹುಡುಗ ಇವತ್ತು ಕೋಟ್ಯಾಧಿಪತಿ..!

ಹುಚ್ಚು ಪರಪಂಚದಲ್ಲಿ ಹುಚ್ಚ ವೆಂಕಟ್ ಗಾನಸುಧೆ.. !

ಎಂದೂ ತೆರಿಗೆ ಕಟ್ಟದ ಗಲ್ಫ್ ಪ್ರಜೆಗಳು ಇನ್ಮುಂದೆ ತೆರಿಗೆಕಟ್ಟಲೇ ಬೇಕು..!

LEAVE A REPLY

Please enter your comment!
Please enter your name here