ವಿದ್ಯುತ್ ಅವಘಡದಿಂದ ಹೆಸ್ಕಾಂ (ಹುಬ್ಬಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ) ಸಿಬ್ಬಂದಿ ಸಾವನ್ನಪ್ಪಿ, ಆತನ ಮೃತದೇಹ ವಿದ್ಯುತ್ ಕಂಬದಲ್ಲೇ ನೇತಾಡಿದ ಘಟನೆ ಗದಗದ ಸೊರಟೂರು ಬಳಿ ನಡೆದಿದೆ.
ಚನ್ನಯ್ಯ ವೀರಯ್ಯ ಸೊಪ್ಪಿನ ಮಠ (22), ಮೃತ. ಶಿರಹಟ್ಟಿ ಹೆಸ್ಕಾಂ ವಿಭಾಗದಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದರು. ವಿದ್ಯುತ್ ಲೈನ್ ದುರಸ್ತಿ ವೇಳೆ ಈ ಘಟನೆ ನಡೆದಿದೆ. ಲೈನ್ ದುರಸ್ತಿ ಸಮಯದಲ್ಲಿ ಹೈ ಟೆನ್ಷನ್ ತಂತಿ ತಗಲಿ ಚನ್ನಯ್ಯ ಮೃತಪಟ್ಟು, ಅವರ ಮೃತದೇಹ ಕಂಬದಲ್ಲೇ ನೇತಾಡಿದೆ…!
ಸಹೋದ್ಯೋಗಿಗಳನ್ನು ಕಳುಹಿಸಿದೆ ಒಬ್ಬನನ್ನೇ ಕಳುಹಿಸಿದ್ದರಿಂದ ಈ ದುರಂತ ನಡೆದಿದೆ ಎಂಬುದು ಕುಟುಂಬಸ್ಥರ ಆರೋಪ.