ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಇಂದು 45ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮಾಸ್ಟರ್ ಬ್ಲಾಸ್ಟರ್ ಗೆ ಆಸ್ಟ್ರೇಲಿಯಾ ಕ್ರಿಕೆಟ್ ಅವಮಾನ ಮಾಡಿದೆ ಎಂದು ಸಚಿನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಆಸೀಸ್ ಕ್ರಿಕೆಟ್ ವಿರುದ್ಧ ಗರಂ ಆಗಿದ್ದಾರೆ.
ಇಂದು (ಏಪ್ರಿಲ್ 24) ಸಚಿನ್ ಅವರ ಹುಟ್ಟುಹಬ್ಬ ಮಾತ್ರವಲ್ಲ. ಆಸ್ಟ್ರೇಲಿಯಾದ ಮಾಜಿ ವೇಗಿ ಡೇಮಿಯನ್ ಫ್ಲೆಮಿಂಗ್ ಅವರ ಜನ್ಮದಿನ ಕೂಡ. ಹೀಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ 2000ನೇ ಇಸವಿಯಲ್ಲಿ ಪರ್ಥ್ ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಫ್ಲೆಮಿಂಗ್ ಎಸೆತದಲ್ಲಿ ಸಚಿನ್ ಬೌಲ್ಡ್ ಆಗುತ್ತಿರೋ ವೀಡಿಯೋ ಹಾಕಿ ಫ್ಲೆಮಿಂಗ್ ಗೆ ವಿಶ್ ಮಾಡಿದೆ. ಆದರೆ, ಸಚಿನ್ ಗೆ ವಿಶ್ ಕೂಡ ಮಾಡಿಲ್ಲ. ಇದು ಸಚಿನ್ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಆಟಗಾರರು ಬ್ಯಾನ್ ಆಗಿದ್ದರೂ ಆಸೀಸ್ ಕ್ರಿಕೆಟ್ ಪಾಠ ಕಲಿತಿಲ್ಲ ಎನ್ನುವುದಕ್ಕೆ ಈ ವೀಡಿಯೋವೇ ಸಾಕ್ಷಿ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫ್ಲೆಮಿಂಗ್ ಗೆ ವಿಶ್ ಮಾಡಲು ಸಚಿನ್ ಬದಲು ಬೇರೆ ಬ್ಯಾಟ್ಸ್ ಮನ್ ಗಳು ಬೋಲ್ಡ್ ಆಗುವ ವೀಡಿಯೋ ಬಳಸಬಹುದಿತ್ತು. ಸಚಿನ್ ಹುಟ್ಟುಹಬ್ಬ ಎಂದು ಗೊತ್ತಿದ್ದರೂ ಇದನ್ನು ಬಳಸಿದ್ದು ಸರಿಯಲ್ಲ ಅನ್ನೋದು ಅಭಿಮಾನಿಗಳ ಮಾತು.
Some @bowlologist gold from the man himself – happy birthday, Damien Fleming! pic.twitter.com/YcoYA8GNOD
— cricket.com.au (@CricketAus) April 24, 2018