ರೆಬಲ್ ಸ್ಟಾರ್ ಅಂಬರೀಶ್ ಚುನಾವಣಾ ನಿವೃತ್ತಿ ಘೋಷಿಸಿದ್ದಾರೆ. ನಾನೂ ಸ್ಪರ್ಧಿಸುವುದಿಲ್ಲ, ಬೇರೆಯವರ ಪರ ಪ್ರಚಾರ ಕೂಡ ಕೈಗೊಳ್ಳುವುದಿಲ್ಲ ಎಂದು ಅಂಬಿ ಹೇಳಿದ್ದಾರೆ.
ನನಗೆ ಆರೋಗ್ಯ ಸರಿಯಿಲ್ಲ. ಆದ್ದರಿಂದ ಚುನಾವಣಗೆ ನಿಲ್ಲಲು ಸಾಧ್ಯ ಆಗ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬೇರೆ ಬೇರೆ ಪಕ್ಷದವರು ಕರೆನೀಡಿದ್ದು ನಿಜ, ಆದರೆ, ನಾನು ಯಾವ ಪಕ್ಷಕ್ಕೂ ಹೋಗಲ್ಲ. ಹಾಗೆಯೇ ನನ್ನ ಆಪ್ತರಾದವರಿಗೆ ಟಿಕೆಟ್ ಕೊಡಿ ಎಂದು ಸಹ ಕೇಳಲಾರೆ. ಹಾಗೆ ಕೇಳಿದರೆ ನಾನೇ ಮುಂದೆ ನಿಂತು ಅವರನ್ನು ಗೆಲ್ಲಿಸಬೇಕು. ಅದರ ಬದಲು ನಾನೇ ನಿಲ್ಲಬಹುದಲ್ಲವೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಎಲ್ಲರೂ ನನ್ನೊಂದಿಗೆ ಚೆನ್ನಾಗಿದ್ದಾರೆ, ಎಲ್ಲರೂ ಮನೆಗೆ ಬರುತ್ತಾರೆ . ಚುನಾವಣಾ ರಾಜಕೀಯದಿಂದ ಮಾತ್ರ ದೂರ ಉಳಿದಿದ್ದೇನೆ. ನಾನು ಯಾರಿಗೂ ಟಿಕೆಟ್ ಬೇಡಿಕೆ ಇಟ್ಟಿಲ್ಲ. ನನಗೆ ಓಟ್ ಹಾಕು ಅನ್ನೋದಕ್ಕು ಬೇರೆಯವರಿಗೆ ಓಟ್ ಮಾಡಿ ಅನ್ನೋದಕ್ಕು ಭಾರೀ ವ್ಯತ್ಯಾಸವಿದೆ ಎಂದರು.
ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಲು ನಾನೂ ಕಾರಣ. ಅಂಬಿ ನಿಂಗೆ ವಯಸ್ಸಾಯ್ತೋ ಎಂಬ ಸಿನಿಮಾ ತೆಗೆಯುತ್ತಿದ್ದೀವಿ. ಇವೆಲ್ಲಾ ಅರ್ಥ ಮಾಡಿಕೊಳ್ಳಬೇಕು.ಕೆಲಸ ಮಾಡು ಸಾಧ್ಯವಿಲ್ಲ ಅಂತ ಸಚಿವ ಸ್ಥಾನದಿಂದ ತೆಗೆದಿದ್ದು. ಆರೋಗ್ಯದ ಕಾರಣ ಬಿಟ್ಟರೆ ಬೇರಾವ ಕಾರಣದಿಂದ ಚುನಾವಣೆಯಿಂದ ಹಿಂದೆ ಸರಿದಿದ್ದೇನಷ್ಟೇ ಎಂದರು.
ಇದನ್ನು ಮೊದಲೇ ಹೇಳಬಹುದತ್ತಲ್ಲವೇ ಎಂದು ಕೇಳಿದ್ದಕ್ಕೆ, ವರುಣಾದಲ್ಲಿ ಏನಾಯ್ತು ನೋಡಿದಿರಲ್ಲ? ಮಂಡ್ಯ ಜನ ಸುಮ್ಮನಿರುತ್ತಿದ್ದರೆ? ಅದಕ್ಕಾಗಿಯೇ ನಾನು ಕೊನೆ ಕ್ಷಣದಲ್ಲಿ ತಿಳಿಸಿದ್ದೇನೆ. ಎಲ್ಲವನ್ನೂ ಯೋಚಿಸಿಯೇ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದರು.