ಮಾನವ ರಹಿತ ಕ್ರಾಸಿಂಗ್ ನಲ್ಲಿ ರೈಲೊಂದು ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 13ಮಕ್ಕಳು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಖುಷಿ ನಗರ್ ಜಿಲ್ಲೆಯಲ್ಲಿಂದು ನಡೆದಿದೆ.
ಬೆಹ್ ಪುರ್ವ್ ಸಮೀಪ ಕ್ರಾಸಿಂಗ್ ಗೇಟ್ ಬಳಿ ಥಾವೆ-ಕಪತ್ ಗಂಜ್ ಪ್ರಯಾಣಿಕರ ರೈಲು ಶಾಲಾ ವ್ಯಾನ್ ಗೆ ಬಡಿದಿದ್ದು ಡಿವೈನ್ ಪಬ್ಲಿಕ್ ಶಾಲೆಯ 13ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ವಿಷಯವನ್ನು ರೈಲ್ವೆ ವಕ್ತಾರ ವೇದ ಪ್ರಕಾಶ್ ತಿಳಿಸಿದ್ದಾರೆ.
ಮಕ್ಕಳೂ ಸೇರಿದಂತೆ ಈ ವ್ಯಾನ್ ನಲ್ಲಿ 25ಮಂದಿ ಮಕ್ಕಳಿದ್ದರು. ಬಹುತೇಕರು 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ತಿಳಿದುಬಂದಿದೆ. ಘಟನೆಯಲ್ಲಿ 8 ಮಂದಿಗೆ ಗಾಯಗಳಾಗಿವೆ. ಸಿಎಂ ಯೋಗಿ ಆದಿತ್ಯನಾಥ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆಗೆ ವಿಷಾಧಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 2ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಗೋರಖ್ ಪುರ್ ಆಯುಕ್ತರಿಗೆ ತನಿಖೆಗೆ ಆದೇಶಿಸಿದ್ದಾರೆ.