No menu items!
4.9 C
Munich
Saturday, May 2, 2026

ಯಶವಂತಪುರದಲ್ಲಿ ಈ ಬಾರಿ ಯಾರಿಗೆ ಯಶಸ್ಸು?

Must read

ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಇನ್ನೂ ಬಹುತೇಕ ಪ್ರದೇಶಗಳು ಬೃಹತ್ ಬೆಂಗಳೂರಿನ‌ ಒಳಗೆ ಬರಲು ಇನ್ನೂ ಸಾಧ್ಯವಾಗಿಲ್ಲ. ಅದಕ್ಕಾಗಿ ಎದುರು ನೋಡುತ್ತಿವೆ.
ಯಶವಂತಪುರ ರೈಲು ನಿಲ್ದಾಣ ಬರುವುದು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ . ಇಲ್ಲಿನ ಎಪಿಎಂಸಿ ಬರುವುದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ…!
2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾದಾಗ ಯಶವಂತಪುರ ವಿಧಾನಸಭಾ ಕ್ಷೇತ್ರ ಹುಟ್ಟಿಕೊಂಡಿತು. ‌ಅದಕ್ಕೂ ಮುನ್ನ ಒಂದಿಷ್ಟು ಭಾಗ ಮಾಗಡಿಗೂ , ಒಂದಿಷ್ಟು ಭಾಗ ಉತ್ತರಹಳ್ಳಿ ಕ್ಷೇತ್ರಕ್ಕೂ ಹಂಚಿ‌ ಹೋಗಿತ್ತು.
ದೊಡ್ಡಬಿದರಕಲ್ಲು , ಹೇರೋಹಳ್ಳಿ, ಉಲ್ಲಾಳು, ಕೆಂಗೇರಿ , ಹೆಮ್ಮೆಗೆಪುರ ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.
ಈ ಕ್ಷೇತ್ರ ಮೇಲ್ನೋಟಕ್ಕೆ ಮುಂದುವರೆದಿರುವಂತೆ ಕಾಣಿಸುತ್ತಿದ್ದರೂ ಹೇಳಿಕೊಳ್ಳುವ ಅಭಿವೃದ್ಧಿ ಕಂಡಿಲ್ಲ.


ಕಾಂಗ್ರೆಸ್ ನ ಎಸ್ ಟಿ ಸೋಮಶೇಖರ್ ಈ ಕ್ಷೇತ್ರದ ಹಾಲಿ ಶಾಸಕರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನ ಜವರಾಯಿ ಗೌಡರ ವಿರುದ್ಧ (91,280ಮತ) 30, 100 ಮತಗಳ ಅಂತರದಿಂದ ಗೆದ್ದಿದ್ದರು. 2008ರಲ್ಲಿ ಕಾಂಗ್ರೆಸ್ ನಿಂದಲೇ ಸ್ಪರ್ಧಿಸಿದ್ದ ಸೋಮಶೇಖರ್ ಬಿಜೆಪಿಯ ಶೋಭಾ ಕರಂದ್ಲಾಜೆ ಅವರೆದುರು 1082 ಮತಗಳ ಅಂತರದಿಂದ ಸೋತಿದ್ದರು.


ಈ ಕ್ಷೇತ್ರದ ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಆಗಿಲ್ಲ. ಹೆರೋಹಳ್ಳಿ, ಉಲ್ಲಾಳು, ಕೆಂಗೇರಿ ಮತ್ತು ಹೆಮ್ಮಿಗೆಪುರ ದಲ್ಲಿ ನೀರಿನ ಸಮಸ್ಯೆ ಇದೆ. ಕುಡಿಯಲು ಶುದ್ಧ ನೀರು ಸಿಗ್ತಿಲ್ಲ, ನೀರಿನ ಟ್ಯಾಂಕರ್ ಗಳನ್ನೇ ಅವಲಂಭಿಸ ಬೇಕಾಗಿದೆ ಎಂಬುದು ಜನರ ಆರೋಪ.‌
ಈ ಬಾರಿ ಬಿಜೆಪಿಯಿಂದ ನಟ ಜಗ್ಗೇಶ್ ಕಣಕ್ಕಿಳಿಯುತ್ತಿದ್ದಾರೆ. ಸೋಮಶೇಖರ್ ಗೆ ಈ ಬಾರಿ ಜಗ್ಗೇಶ್ ಅವರಿಂದ ಪ್ರಬಲ ಪೈಪೋಟಿ ಇದೆ. 2008ರಲ್ಲಿ ಇದೇ ಸೋಮಶೇಖರ್ ಬಿಜೆಪಿಯ ಶೋಭಾ ಕರಂದ್ಲಾಜೆ ಅವರ ಎದುರು ಸೋತಿದ್ದನ್ನು ಸ್ಮರಿಸಬಹುದು.
ಒಮ್ಮೆ ಬಿಜೆಪಿಗೆ ಇನ್ನೊಮ್ಮೆ ಕಾಂಗ್ರೆಸ್ ಗೆ ಒಲಿದ ವಿಜಯಲಕ್ಷ್ಮಿ ಈ ಬಾರಿ ಯಾರಿಗೆ ಒಲಿಯುತ್ತಾಳೆ ಅನ್ನೋದಕ್ಕೆ ಕಾಯಬೇಕಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article