ಬೆಂಗಳೂರಿನಿಂದ ಕೇರಳಕ್ಕೆ ಹೊರಟಿದ್ದ ಬಸ್ ಹೈಜಾಕ್ ಮಾಡಿದ್ದಾರೆ.
ಎರಡು ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಬಸ್ ಗೆ ಅಡ್ಡಗಟ್ಟಿ ಡ್ರೈವರ್ ಮೇಲೆ ಹಲ್ಲೆ ನಡೆಸಿ ಕಿಡ್ನ್ಯಾಪ್ ಮಾಡಿದ್ದಾರೆ.
ಪೊಲೀಸ್ ಎಂದು ಬಸ್ ಅಡ್ಡಗಟ್ಟಿದ ನಾಲ್ವರು ದುಷ್ಕರ್ಮಿಗಳು ಬಸ್ ಅಪಹರಿಸಿ ಪಟ್ಟಣಗೆರೆ ಗೋಡಾನ್ ನಲ್ಲಿರಿಸಿದ್ದರು.
42 ಜನ ಪ್ರಯಾಣಿಕರಿದ್ದರು. ಕೃತ್ಯದಿಂದ ಭಯ ಬೀತಿಗೊಂಡಿದ್ದರು ಪ್ರಯಾಣಿಕರು.
Ka 01 ag 636 ನಂಬರಿನ ಲಾಮಾ ಟ್ರಾವಲ್ಸ್ ಗೆ ಸೇರಿದ ಬಸ್
ಇದು ನೌಷಾದ್ ಎಂಬುವವರ ಒಡೆತನದಲ್ಲಿದೆ.
ಫೈನಾನ್ಸ್ ವಿಚಾರವಾಗಿ ಅಪಹರಿಸಿರೋದಾಗಿ ಬಂಧಿತನಿಂದ ಹೇಳಿದ್ದಾನೆ.
30 ಕ್ಕೂ ಹೆಚ್ಚು ಪೊಲೀಸರು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದು,ಪೊಲೀಸರನ್ನ ಕಂಡು 7 ಮಂದಿ ದುಷ್ಕರ್ಮಿಗಳು ಕಾಲ್ಕಿತ್ತಿದ್ದಾರೆ.
ರಾಜ ರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.