ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಎ ಬಿ ಡಿವಿಲಿಯರ್ಸ್ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ಮೂಲಕ ನಮ್ಮವರೇ ಆಗಿಬಿಟ್ಟಿದ್ದಾರೆ.
ಬೆಂಗಳೂರಿಗೆ ಅತಿಥಿಯಾಗಿ ಬಂದ ಎ ಬಿ ಡಿವಿಲಿಯರ್ಸ್ ಇಂದು ರಾಜ್ಯದ ಮನೆಮಗ ಆಗಿಬಿಟ್ಟಿದ್ದಾರೆ…! ಈ ನಮ್ಮ ಎ ಬಿ ಡಿವಿಲಿಯರ್ಸ್ ಗೆ ಒಂದಿಬ್ಬರು ಕ್ರಿಕೆಟಿಗರನ್ನು ಕಂಡರೆ ಅಯ್ಯೋ ಅನಿಸುತ್ತಂತೆ.
ನಿಮಗೆ ಗೊತ್ತೇ ಇದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಆಸೀಸ್ ತಂಡವನ್ನು ಮುನ್ನಡೆಸುತ್ತಿದ್ದ ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್ ಸಹ ಆಟಗಾರ ಬೆನ್ಕ್ರಾಫ್ಟ್ ಚೆಂಡನ್ನು ವಿರೂಪಗೊಳಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಕ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ ಅವರನ್ನು 1 ವರ್ಷ ಕ್ರಿಕೆಟಿನಿಂದ ಬ್ಯಾನ್ ಮಾಡಿದೆ. ಈ ಬಗ್ಗೆ ಪಶ್ಚಾತಾಪ ವ್ಯಕ್ತಪಡಿಸಿದ ಸುದ್ದಿಗೋಷ್ಠಿಯಲ್ಲಿ ಅತ್ತಿದ್ದರು.
ಈಗ ಎ ಬಿಡಿ ಈ ಬಗ್ಗೆಯೇ ಮರುಕ ಪಟ್ಟಿರೋದು. ಈ ಶಿಕ್ಷೆಗೆ ಗುರಿಯಾದ ಆಟಗಾರರನ್ನು ಕಂಡರೆ ಮರುಕ ಹುಟ್ಟುತ್ತೆ. ಅದರಲ್ಲೂ ಸ್ಮಿತ್ ಉತ್ತಮ ಆಟಗಾರ , ಇದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರಿದೆ. ಇದರಿಂದ ಆಚೆ ಬರಲು ಅವರಿಗೆ ಇನ್ನೂ ಹೆಚ್ಚು ದಿನಗಳು ಬೇಕು ಎಂದು ಡಿವಿಲಿಯರ್ಸ್ ಹೇಳಿದ್ದಾರೆ.