ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
ಶೇ. 59.56 ರಷ್ಟು ಫಲಿತಾಂಶ ಬಂದಿದೆ.
4,08,421ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ ಸಿಕ್ಕಿದೆ. ಉಡುಪಿ ಎರಡನೇ ಸ್ಥಾನದಲ್ಲಿ ಹಾಗೂ ಕೊಡಗು ಮೂರನೇ ಸ್ಥಾನದಲ್ಲಿದೆ. ಚಿಕ್ಕೋಡಿ ಕೊನೆಯ ಸ್ಥಾನ ಪಡೆದಿದೆ.
ಒಟ್ಟು ಫಲಿತಾಂಶದಲ್ಲಿ ಶೇ 52.30 ಬಾಲಕರು, ಶೇ 67.11ಬಾಲಕಿಯರು ಪಾಸಾಗಿದ್ದಾರೆ.
3ಸರ್ಕಾರಿ ಕಾಲೇಜು, 122ಖಾಸಗಿ ಕಾಲೇಜು, 3 ಅನುದಾನಿತ ಕಾಲೇಜು ಸೇರಿದಂತೆ 118 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿವೆ.