ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಮೆಜೆಸ್ಟಿಕ್’ ಚಿತ್ರದ ನಿರ್ದೇಶಕ ಪಿ.ಎನ್ ಸತ್ಯ ಇಂದು (ಶನಿವಾರ) ಸಂಜೆ ನಿಧನರಾದರು.
ದರ್ಶನ್ ಅಭಿನಯದ ಮೆಜೆಸ್ಟಿಕ್, ಸುದೀಪ್ ಅಭಿನಯದ ‘ಗೂಳಿ’ , ದುನಿಯಾ ವಿಜಯ್ ಅಭಿನಯದ ‘ಶಿವಾಜಿ ನಗರ’ ಸೇರಿದಂತೆ ಹತ್ತಾರು ಸಿನಿಮಾಗಳಿಗೆ ಇವರು ಆ್ಯಕ್ಷನ್ ಕಟ್ ಹೇಳಿದ್ದರು.
ಪಾಗಲ್ ಎಂಬ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದರು. ನಾನಾ ಸಿನಿಮಾಗಳಲ್ಲಿ ಖಳನಟನಾಗಿ ಬಣ್ಣ ಹಚ್ಚಿದ್ದರು.
ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ನಾಗರ ಬಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಶುಕ್ರವಾರ ಮನೆಗೆ ಕರೆತರಲಾಗಿತ್ತು. ಆದರೆ, ಇಂದು ಸಂಜೆ ರಕ್ತದೊತ್ತಡ ಕಡಿಮೆ ಆಗಿದ್ದು, ವಿಧಿವಶರಾದರು. ಬಸವೇಶ್ವರ ನಗರದ ಸಹೋದರಿ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಸತ್ಯ ನಿರ್ದೇಶನದ ಚಿತ್ರಗಳು
* ಮೆಜೆಸ್ಟಿಕ್
* ಡಾನ್
* ದಾಸಾ
* ಸರ್ದಾರ
* ಉಡೀಸ್
* ಶಾಸ್ತ್ರಿ
* ತಂಗಿಗಾಗಿ
* ಗೂಳಿ
* ಕೆಂಚ
* ಹ್ಯಾಟ್ರಿಕ್ ಹೊಡಿಮಗ
* ಸುಗ್ರೀವ
* ಪಾಗಲ್
* ಜೇಡರಹಳ್ಳಿ
* ಶಿವಾಜಿನಗರ
* ಬೆಂಗಳೂರು ಅಂಡರ್ ವರ್ಲ್ಡ್
* ಮರಿ ಟೈಗರ್