ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಬಾಲ್ ಟ್ಯಾಂಪರಿಂಗ್ ಮಾಡಿದ ತಪ್ಪಿಗೆ ಆಸೀಸ್ ಕ್ರಿಕೆಟಿಗರಾದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಮತ್ತು ಕ್ಯಾಮರೋನ್ ಬೆನ್ ಕ್ರಾಫ್ಟ್ ನಿಷೇಧಕ್ಕೆ ಒಳಗಾಗಿರೋದು ನಿಮಗೆ ಗೊತ್ತೇ ಇದೆ.
ಇವರುಗಳಲ್ಲಿ ಡೇವಿಡ್ ವಾರ್ನರ್ ಈಗ ಏನ್ ಮಾಡ್ತಿದ್ದಾರೆ ಅನ್ನೋದೇನಾದ್ರು ಗೊತ್ತಿದೆಯೇ…?
ವಾರ್ನರ್ ತಪ್ಪಿಗೆ ಪ್ರಾಯಶ್ಚಿತ ಪಡ್ತಿದ್ದಾರೆ. ಪ್ರಕರಣದಿಂದ ಜೀವನದಲ್ಲಿ ಸಾಕಷ್ಟು ವಿಷಯಗಳನ್ನು ಅರ್ಥ ಮಾಡಿಕೊಂಡಿದ್ದೀನಿ ಎಂದಿದ್ದಾರೆ.
ಅಭಿಮಾನಿಗಳ ಸಹಕಾರದಿಂದ ಕುಟುಂಬದತ್ತ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗಿದೆ. ಕುಟುಂಬದೊಂದಿಗೆ ಕಾಲಕಳೀತಿದ್ದೀನಿ. ಇದು ಹಿತವಾದ ಅನುಭವ ನೀಡುತ್ತಿದೆ. ಮಕ್ಕಳ ಪ್ರೀತಿಯನ್ನು ಆಸ್ವಾದಿಸುತ್ತಿದ್ದೇನೆ ಅವರಿಗೆ ಈಜು ಮತ್ತು ಜಿಮ್ನಾಸ್ಟಿಕ್ ಹೇಳಿಕೊಡ್ತಿದ್ದೀನಿ ಎಂದು ವಾರ್ನರ್ ಹೇಳಿದ್ದಾರೆ.