ನಟ ಸಾರ್ವಭೌಮ, ಅಭಿಮಾನಿಗಳ ದೇವರು ಡಾ. ರಾಜ್ ಕುಮಾರ್ ಅವರ ಹೆಸರಲ್ಲಿ ಅವರ ಕುಟುಂಬ ‘ ಡಾ. ರಾಜ್ ಕುಮಾರ್ ಅಕಾಡೆಮಿ ಫಾರ್ ಸಿವಿಲ್ ಸರ್ವಿಸ್ ಕೋಚಿಂಗ್ ಸೆಂಟರ್’ ಅನ್ನು ಸ್ಥಾಪಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ನೆರವಾಗಿರೋದು ನಿಮ್ಗೆ ಗೊತ್ತೇ ಇದೆ.
ಮೊದಲ ವರ್ಷದಲ್ಲೇ ಈ ಸಂಸ್ಥೆಯ 16 ಅಭ್ಯರ್ಥಿಗಳು ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ.
ಸಂಸ್ಥೆಯಲ್ಲಿ ಈ ಅಭ್ಯರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು.
ಮಾತನಾಡುತ್ತಾ, ನನ್ನ ‘ಪೃಥ್ವಿ’ ಸಿನಿಮಾ ಕೆಲವರಿಗೆ ಸ್ಫೂರ್ತಿ ಎಂದು ಹೇಳಿದ್ದೀರಿ. ಆದರೆ, ನಾನು ಸಿನಿಮಾದಲ್ಲಿ ಮಾತ್ರ ಹೀರೋ…ನಿಜವಾದ ಹೀರೋಗಳು ನೀವು…ನಾನು ಪಾತ್ರವನ್ನು ಮಾತ್ರ ಮಾಡಿದ್ದೀನಿ ಎಂದು ಹೇಳಿ ಅಭಿನಂದನೆ ಸಲ್ಲಿಸಿದ್ರು.