ಕನ್ನಡ ಕಿರುತೆರೆಯ ಅತ್ಯಂತ ಯಶಸ್ವಿ ರಿಯಾಲಿಟಿ ಶೋ ಕನ್ನಡದ ಕೋಟ್ಯಾಧಿಪತಿ. ಸುವರ್ಣ ವಾಹಿನಿಯ ಈ ಶೋ ಅನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಟ್ಟಿದ್ದರು. ಈ ಬಾರಿ ಈ ಕಾರ್ಯಕ್ರಮದ ನಿರೂಪಣೆಯ ಹೊಣೆಯನ್ನು ನಟ ರಮೇಶ್ ಅರವಿಂದ್ ಹೊತ್ತಿದ್ದಾರೆ.
ರಮೇಶ್ ಅರವಿಂದ್ ಅವರು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನಡೆಸಿ ಕೊಡಲು ಒಪ್ಪಿಕೊಂಡಿದ್ದರಿಂದ ಝೀ ಕನ್ನಡದಲ್ಲಿ ನಡೆಸಿಕೊಡ್ತಿದ್ದ ಸಾಧಕರ ಪರಿಚಯದ ಕಾರ್ಯಕ್ರಮ ‘ವೀಕೆಂಡ್ ವಿತ್ ರಮೇಶ್’ ಗೆ ಗುಡ್ ಬೈ ಹೇಳಿದ್ರ? ಎಂಬ ಪ್ರಶ್ನೆ ಮೂಡುತ್ತದೆ.
ಈ ಬಗ್ಗೆ ರಮೇಶ್ ಅವರೇ ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಮಾತ್ರ ಝೀ ಕನ್ನಡದಿಂದ ಹೊರಬಂದಿದ್ದು, ಅಲ್ಲಿನ ಮುಖ್ಯಸ್ಥರೊಂದಿಗೆ ಚರ್ಚಿಸಿಯೂ ಇದ್ದಾರಂತೆ. ಕೋಟ್ಯಾಧಿಪತಿ ಮುಗಿದ ಬಳಿಕ ವೀಕೆಂಡ್ ವಿತ್ ರಮೇಶ್ ಶುರುವಾದ್ರೆ ಖಂಡಿತಾ ಅದನ್ನು ನಡೆಸಿ ಕೊಡುತ್ತೇನೆ ಎಂದು ಹೇಳಿದ್ದಾರೆ.