ನಮ್ಮ ಕಾರ್ಯಕರ್ತರನ್ನು ಮುಟ್ಟಿದರೆ ಜೋಕೆ ಎಂದು ಸಂಸದ ಪ್ರತಾಪ ಸಿಂಹ ಟ್ವೀಟ್ ಮಾಡಿದ್ದು, ಪರ ವಿರೋಧದ ಚರ್ಚೆಗೆ ಕಾರಣವಾಗಿದೆ.
ಇಂದು ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಿಎಸ್ ವೈ ಪ್ರಮಾಣ ವಚನ ಸ್ವೀಕಾರಕ್ಕೆ ಮುನ್ನವೇ ನಿನ್ನೆಯೇ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದು, ‘ ನಮ್ಮ ಕಾರ್ಯಕರ್ತರನ್ನು ನಾಳೆಯಿಂದ ಮುಟ್ಟಿದ್ರೆ ಜೋಕೆ! 23 ಜನರನ್ನು ಕಳೆದಯಕೊಂಡ ನೋವಿಗೆ ನಾಳೆ ಅಂತಿಮ ತೆರೆ ಎಂದು ಹೇಳಿದ್ದಾರೆ.
ಪ್ರತಾಪ್ ಸಿಂಹ ಅವರ ಈ ಟ್ವೀಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಮ್ಮ ಕಾರ್ಯಕರ್ತರನ್ನ ನಾಳೆಯಿಂದ ಮುಟ್ಟಿದ್ರೆ ಜೋಕೆ! ೨೩ ಜನರನ್ನ ಕಳೆದುಕೊಂಡ ನೋವಿಗೆ ನಾಳೆ ಅಂತಿಮ ತೆರೆ!!
— Pratap Simha (@mepratap) May 16, 2018