ರಾಕಿಂಗ್ ಸ್ಟಾರ್ ಯಶ್ ತನ್ನ ಲವ್ ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ.ತನ್ನ ಪ್ರೇಯಸಿಯನ್ನೀಗ ನೆನಪಿಸಿಕೊಂಡಿದ್ದಾರೆ.
ಯಶ್ ರಾಧಿಕಾ ಪಂಡಿತ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇದೇನಿದು ಈಗ ಲವ್ ಸ್ಟೋರಿ ಹೇಳ್ತಿದ್ದಾರೆ. ಲವ್ವರ್ ಅನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ನೀವು ಯೋಚಿಸ್ತಿದ್ದೀರ?
ಯಶ್ ನೆನಪಿಸಿಕೊಂಡಿರುವುದು ಜೊತೆಗಿರುವ ರಾಧಿಕಾ ಪಂಡಿತ್ ಅವರನ್ನೇ. ರಾಧಿಕ ಮತ್ತು ತಮ್ಮ ಲವ್ ಸ್ಟೋರಿ ಬಗ್ಗೆಯೇ ಯಶ್ ಹೇಳಿದ್ದು.
ಇದು ನಾಲ್ಕು ವರ್ಷದ ಹಿಂದಿನ ಕಥೆಯಂತೆ. ತನ್ನ ಹುಡುಗಿ ರಾಧಿಕಾಳನ್ನು ನೋಡಬೇಕು ಎಂದು ಫಿಕ್ಸ್ ಆದ ಯಶ್ ರಾತ್ರೋರಾತ್ರಿ ವಿಜಯಪುರಕ್ಕೆ ಹೋಗಿದ್ದಾರಂತೆ. ಅಭಿಮಾನಿಗಳು ಗುರುತಿಸಬಾರದು ಎಂದು ಹೆಲ್ಮೆಟ್ ಧರಿಸಿ ಊರು ಸುತ್ತಿದ್ದರಂತೆ.
ರಾಧಿಕಾರನ್ನು ಕರೆದುಕೊಂಡು ಹೋಗಿ ಗೋಲ್ ಗುಂಬಜ್ ತೋರಿಸಿ ಶಿವನ ದೇವಸ್ಥಾನದಲ್ಲಿ ಪೂಜೆ ಮಾಡಿಸಿರುವುದಾಗಿ ಯಶ್ ಹೇಳಿದ್ದಾರೆ.