4. ಶ್ರೀಮಂತರಿಗಿನ್ನು ಎಲ್.ಪಿ.ಜಿ ಸಬ್ಸಿಡಿ ಇಲ್ಲ
ಇನ್ನು ಶ್ರೀಮಂತರಿಗೆ ಎಲ್ಪಿಜಿ ಸಬ್ಸಿಡಿ ನೀಡುವುದನ್ನು ನಿಲ್ಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 10ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚಿನ ತೆರಿಗೆ ಪಾವತಿಸುವವರಿಗೆ ಸಬ್ಸಿಡಿ ನೀಡದಿರಲು ಕೇಂದ್ರ ತೀಮರ್ಾನಿಸಿದ್ದು, ಹೊಸ ವರ್ಷದಿಂದಲೇ ಈ ನಿಯಮ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಸದ್ಯ 16.35 ಕೋಟಿ ಎಲ್ಪಿಜೆ ಗ್ರಾಹರಿದ್ದು, 57.50 ಗ್ರಾಹಕರು ಸ್ವಯಂ ಪ್ರೇರಿತರಾಗಿ ಈಗಾಗಲೇ ಸಬ್ಸಿಡಿ ಬಿಟ್ಟು ಕೊಟ್ಟಿದ್ದಾರೆ.
2.ಜನವರಿ 16ರಿಂದ `ಸ್ಟಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ’..!
ಉದ್ಯಮಗಳಿಗೆ ನೆರವು, ಉತ್ತೇಜನ ನೀಡುವ ಉದ್ದೇಶದಿಂದ, ಯುವ ಸಮೂಹಕ್ಕೆ ನೆರವಾಗುವ ನಿಟ್ಟಲ್ಲಿ ಹೊಸವರ್ಷದ ಜನವರಿ 16ರಂದು ಕೇಂದ್ರ ಸರ್ಕಾರ ಜನವರಿ 16ರಂದು `ಸ್ಟಾರ್ಟ್ ಅಪ್ ಇಂಡಿಯಾ, ಸ್ಟಾಂಡ್ ಅಪ್ ಇಂಡಿಯಾ’ ಎಂಬ ಯೋಜನೆಯನ್ನು ಪ್ರಕಟಗೊಳಿಸಲಿದೆ.
ಆಕಾಶವಾಣಿಯಲ್ಲಿ ತಮ್ಮ ಮಾಸಿಕ `ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಸ್ವಂತಃ ಪ್ರಧಾನಿ ಮೋದಿಯವರೇ ಈ ವಿಷಯವನ್ನು ತಿಳಿಸಿದ್ದಾರೆ. ಸೇವಾವಲಯ, ಕೃಷಿ ಉತ್ಪಾದನೆ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಹೊಸತನದಿಂದ ಮುಂದೆ ಸಾಗಲು ಈ ಯೋಜನೆ ಪ್ರಮುಖವಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಸಮಾಜದ ಕಟ್ಟಕಡೆ ಯುವಸಮೂಹಕ್ಕೆ ತಲುಪುವ ರೀತಿಯಲ್ಲಿ ಈ ಯೋಜನೆ ಇರಲಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
2. ಶಾಸಕಾಂಗ-ಕಾರ್ಯಾಂಗ ಭ್ರಷ್ಟಾಚಾರದಲ್ಲಿ ಅವಳಿ-ಜವಳಿ
ಭ್ರಷ್ಟಾಚಾರದಲ್ಲಿ ಶಾಸಕಾಂಗ ಮತ್ತು ಕಾರ್ಯಂಗ ಅವಳಿ-ಜವಳಿಗಳಂತೆ. ಯಾವುದೇ ಹಗರಣಗಳನ್ನು ಗಮನಿಸಿದರೂ ಅವುಗಳಲ್ಲಿ ಈ ಎರಡು ಅಂಗಗಳ ಪಾತ್ರ ಇದ್ದೇ ಇರುತ್ತದೆ ಎಂದು ಮಾಜಿ ಲೋಕಾಯುಕ್ತ ನ್ಯಾ. ಎನ್. ಸಂತೋಷ್ ಹೆಗ್ಡೆ ಹೇಳಿದ್ದಾರೆ.
ದ. ಕನ್ನಡ ಜಿಲ್ಲಾ ಸೋಮಕ್ಷತ್ರಿ ಸಮಾಜ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಸಂಭ್ರಮ ಮತ್ತು ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಸಂವಿಧಾನಾತ್ಮಕವಾಗಿ ಜನ ಕಲ್ಯಾಣಕ್ಕಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳ ಬೇಕಾದ ಶಾಸಕಾಂಗ ಭಷ್ಟಚಾರದಲ್ಲಿ ಮುಳಿದೆ. ಜನಪ್ರತಿನಿಧಿಗಳು ಸಂಸತ್ತಲ್ಲಿ ದೇಶದ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು. ಆದರೆ ಇವತ್ತು ಅಂತ ಚರ್ಚೆಗಳು ಆಗುತ್ತಿಲ್ಲ. ಅಧಿವೇಶನಕ್ಕೆ ದಿನಕ್ಕೆ 10ಕೋಟಿ ರೂ ಖರ್ಚು ಮಾಡಲಾಗುತ್ತದೆ. ಆದರೆ ಅದರಿಂದ ಪ್ರಯೋಜನವೇನೆಂದು ವಿಷಾದ ವ್ಯಕ್ತಪಡಿಸಿದರು.
4. ಐಸಿಸ್ ತಡೆಯಲು ರಾಮಮಂದಿರ ನಿರ್ಮಾಣ ಆಗಬೇಕು : ತೊಗಾಡಿಯಾ
ಐಸಿಸ್ ಉಗ್ರ ಸಂಘಟನೆ ಭಾರತದಲ್ಲಿ ತನ್ನ ಜಾಲ ಹರಡುವುದನ್ನು ತಡೆಯಲು ರಾಮಮಂದಿರ ನಿರ್ಮಾಣ ಮಾಡಬೇಕೆಂದು ವಿಶ್ವ ಹಿಂದೂ ಪರಿಷತ್ (ವಿ.ಎಚ್.ಪಿ) ನಾಯಕ ಪ್ರವೀಣ್ ತೊಗಾಡಿಯಾ ನುಡಿದಿದ್ದಾರೆ.
ಮಧ್ಯಪ್ರದೇಶದ ಜಬಲ್ಬುರದಲ್ಲಿ ನಡೆಯುತ್ತಿರೋ ವಿಎಚ್ಪಿನ ರಾಷ್ಟ್ರೀಯಾ ಕಾರ್ಯಕಾರಿಣಿ ಸಭೆಯಲ್ಲಿ ಮಾತಾನಾಡುತ್ತಾ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ ತೊಗಾಡಿಯಾ ” ಭಾರತದ ಇನ್ನೊಂದು ಸಿರಿಯಾ ಆಗುವುದನ್ನು ತಪ್ಪಿಸಲು, ಐಸಿಸ್ ಉಗ್ರ ಸಂಘಟನೆಯನ್ನು ಸೋಲಿಸಲು ರಾಮ ಮಂದಿರ ನಿರ್ಮಾಣದಿಂದ ಮಾತ್ರವೇ ಸಾಧುವೆಂದು ಅಭಿಪ್ರಾಯ ಪಟ್ಟ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಅನುಕೂಲಕರವಾಗಿರುವಂತ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
5. ಹೊಸ ವರ್ಷಾಚರಣೆಗಾಗಿ ಬ್ರಿಟನ್ ಗೆ ಹಾರಿದ ರಾಹುಲ್ ಗಾಂಧಿ..!
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೊಸ ವರ್ಷಾಚರಣೆಗಾಗಿ ಬ್ರಿಟನ್ಗೆ ಹಾರಿದ್ದಾರೆ..! ಕಾಂಗ್ರೆಸ್ ಪಕ್ಷದ 130ನೇ ಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ ಎಲ್ಲರಿಗೂ ಹೊಸ ವರುಷದ ಶುಭಾಶಯಗಳನ್ನು ಕೋರಿ ಕೆಲವು ದಿನಗಳ ಮಟ್ಟಿಗೆ ಬ್ರಿಟನ್ಗೆ ಹೋಗಿ ಬರ್ತೀನಿ ಅಂತ ತಿಳಿಸಿದ್ದಾರೆ. ಅವರು ಅಲ್ಲೇ ಹೊಸ ವರ್ಷ ಆಚರಿಸಲಿದ್ದಾರೆ. ಇಷ್ಟು ದಿನ ಹೇಳದೆ ಕೇಳದೆ ವಿದೇಶಕ್ಕೆ ಹಾರಿ, ವಿವಾದಕ್ಕೆ ಕಾರಣರಾಗ್ತಾ ಇದ್ದ ರಾಹುಲ್ ಗಾಂಧಿ ಇದೀಗ ಎಲ್ಲರಿಗೂ ಹೊಸ ವರುಷದ ಶುಭಾಶಯಗಳನ್ನು ತಿಳಿಸಿಯೇ ಲಂಡನ್ ಗೆ ಹೋಗಿದ್ದಾರೆ.
6. ಕಾಂಗ್ರೆಸ್ ಮುಖವಾಣಿಯಲ್ಲಿ ಸೋನಿಯಾ, ನೆಹರೂ ಬಗ್ಗೆ ಟೀಕೆ
ಕಾಂಗ್ರೆಸ್ ನಾಯಕರಾದ ನೇತಾಜಿ ಜವಾಹರ್ ಲಾಲ್ ನೆಹರೂ ಹಾಗೂ ಸೋನಿಯಾ ಗಾಂಧಿಯವರನ್ನು ಟೀಕಿಸುವ ಮೂಲಕ ಮಹಾರಾಷ್ಟ್ರದ ಕಾಂಗ್ರೆಸ್ ಮುಖವಾಣಿ ಪತ್ರಿಕೆ ತೀವ್ರ ಮುಜುಗರಕ್ಕೊಳಗಾಗಿದೆ. ಪಕ್ಷದ ಮುಖವಾಣಿ `ಕಾಂಗ್ರೆಸ್ ದರ್ಶನ್’ ತನ್ನ ಡಿಸೆಂಬರ್ ಆವೃತ್ತಿಯಲ್ಲಿ ಸೋನಿಯಾ ಗಾಂಧಿಯವರ ತಂದೆಯನ್ನು ಇಟಲಿಯ ಫ್ಯಾಸಿಸ್ಟ್ ಪಡೆಯ ಓರ್ವ ಸದಸ್ಯನೆಂದು ಹೇಳಿದೆ.
7. ಸ್ಮೃತಿ ಇರಾನಿ ಕುರಿತ ಹೇಳಿಕೆ: ಮಾಜಿ ಸಚಿವರ ವಿರುದ್ಧ ಕ್ರಮ
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿಯವರನ್ನು ಮೋದಿಯವರ ಎರಡನೇ ಪತ್ನಿ ಎನ್ನುವ ಮೂಲಕ ಕಾಂಗ್ರೆಸ್ ನಾಯಕರೊಬ್ಬರು ವಿವಾದ ಸೃಷ್ಟಿಸಿದ್ದಾರೆ. ಮಾಜಿ ರಾಜ್ಯ ಕೃಷಿ ಸಚಿವ ನಿಲಮೋನಿ ಸೆನ್ ದೆಕಾ ಅವರು ಭಾನುವಾರ ಈ ರೀತಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಈ ವಿವಾದಿತ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಸಚಿವರ ಹೇಳಿಕೆ ನಾಚಿಕೆಗೇಡು ಎಂದಿದ್ದಾರೆ. ಅದೇ ವೇಳೆ ದೆಕಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಬಿಜೆಪಿ ತೀರ್ಮಾನಿಸಿದೆ.
8. ದಾದ್ರಿ ಕೇಸ್ : ಇಕ್ಲಾಕ್ ಮನೆಯಲ್ಲಿದ್ದುದು ಮಟನ್
ಉತ್ತರಪ್ರದೇಶದ ದಾದ್ರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಸುಳ್ಳು ವದಂತಿಯಿಂದ ಹತ್ಯೆಗೀಡಾದ ಇಕ್ಲಾಖ್ ಮನೆಯ ರೆಫ್ರಿಜರೇಟರ್ ನಲ್ಲಿ ಸಿಕ್ಕಿದ್ದು ಮಟನ್ ಮಾಂಸವೇ ಹೊರತು ಬೀಫ್ ಅಲ್ಲ ಎಂದು ಮುಖ್ಯ ವೆಟರ್ನರಿ ಆಫೀಸರ್ ನೀಡಿರುವ ವರದಿ ಸ್ಪಷ್ಟಪಡಿಸಿರುವುದಾಗಿ ಉತ್ತರಪ್ರದೇಶ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
9. ರಾಜ್ಯದಲ್ಲಿ ರಹಸ್ಯ ಅಣುಬಾಂಬ್ ತಯಾರಿ ವರದಿ ಸುಳ್ಳು
ಭಾರತ ರಹಸ್ಯವಾಗಿ ಹೈಡ್ರೋಜನ್ ಆಧಾರಿತ ವಿನಾಶಕಾರಿ ಅಣುಬಾಂಬ್ಅಸ್ತ್ರ ತಯಾರಿಗೆ ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ ಕರ್ನಾಟಕದ ಚಳ್ಳಕೆರೆಯಲ್ಲಿ ರಹಸ್ಯ ಪರಮಾಣು ನಗರ ಸ್ಥಾಪಿಸಲಾಗುತ್ತಿದೆ’ ಎಂದು ಅಮೆರಿಕದ ಪತ್ರಕರ್ತರೊಬ್ಬರು ಮಾಡಿದ “ಸ್ಫೋಟಕ’ ವರದಿಯನ್ನು ಭಾರತೀಯ ಅಣುಶಕ್ತಿ ಆಯೋಗ ಸಾರಾಸಗಟಾಗಿ ತಿರಸ್ಕರಿಸಿದೆ.
1೦. ಬಿಜೆಪಿ ನನ್ನಲ್ಲಿ ಕ್ಷಮೆ ಬೇಡುತ್ತಿದೆ: ಕೇಜ್ರಿವಾಲ್ ವ್ಯಂಗ್ಯ
ಡಿಡಿಸಿಎ ಹಗರಣದಲ್ಲಿ ಅರುಣ್ ಜೇಟ್ಲಿ ಕುರಿತು ಬಿಜೆಪಿಯು ನನ್ನಲ್ಲಿ “ಕ್ಷಮೆಗಾಗಿ ಬೇಡುತ್ತಿದೆ’ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಕೇಂದ್ರ ವಿತ್ತ ಸಚಿವ ಜೇಟ್ಲಿ ಅವರು ಡಿಡಿಸಿಎ ಹಣಕಾಸು ವ್ಯವಹಾರದಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಕೇಜ್ರಿವಾಲ್ ತನಿಖೆಗೆ ಆರೋಪಿಸಿದ್ದರು. ತನಿಖಾ ಸಮಿತಿಯ ವರದಿಯಲ್ಲಿ ಜೇಟ್ಲಿ ಹೆಸರೇ ಉಲ್ಲೇಖವಾಗದಿರುವ ಕಾರಣಕ್ಕೆ “ಕೇಜ್ರಿವಾಲ್ ಬಹಿರಂಗ ಕ್ಷಮೆಯಾಚಿಸಬೇಕು’ ಎಂದು ಬಿಜೆಪಿ ಆಗ್ರಹಿಸಿತ್ತು.