ವಿಶ್ವಾಸಮತ ಯಾಚನೆ ಮಾಡದೆ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಕೇವಲ 55 ಗಂಟೆಗಳ ಕಾಲ ಅಧಿಕಾರದಲ್ಲಿದ್ದ ಯಡಿಯೂರಪ್ಪ ವಿಶ್ವಾಸಮತ ಯಾಚನೆ ಮಾಡದೇ ಅಧಿಕಾರ ತ್ಯಜಿಸಿದ್ದಾರೆ.
ಜನರ ಪರವಾಗಿ ಬದುಕಿನುದ್ದಕ್ಕೂ ಹೋರಾಟ ಮಾಡುತ್ತೇನೆ. ಕುಮಾರ ಸ್ವಾಮಿಯವರೇ ಸುಮ್ಮನೆ ಕೂರಲ್ಲ ಎಂದು ಎಚ್ಚರಿಕೆ ನೀಡಿ ಸದನದಿಂದ ಹೊರನಡೆದು, ರಾಜಭವನದತ್ತ ತೆರಳಿದರು.