ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆ, ಸ್ಟೈಲ್, ಮಾತು, ಸ್ಮೈಲ್ ಗೆ ಫಿದಾ ಆಗದೇ ಇರುವವರೇ ಇಲ್ಲ. ಕಿಚ್ಚನ ಮೇಲೆ ಅದೆಷ್ಟೋ ನಟಿಯರಿಗೆ ಕ್ರಶ್ ಆಗಿದೆ. ಅದನ್ನು ಅನೇಕ ನಟಿಯರು ಮುಕ್ತವಾಗಿ ಹೇಳಿಕೊಂಡಿದ್ದಾರೆ.
ಆದರೆ, ಸುದೀಪ್ ಗೆ ಯಾವ ನಟಿಯ ಮೇಲಾದರೂ ಕ್ರಶ್ ಆಗಿತ್ತೇ? ಎಂಬ ಕುತೂಹಲ ನಿಮಗೆ ಇರಬಹುದು..!? ಈ ಬಗ್ಗೆ ಇಲ್ಲಿತನಕ ಸುದೀಪ್ ಏನನ್ನೂ ಹೇಳಿರಲಿಲ್ಲ. ಇದೀಗ ಸುದೀಪ್ ಗೆ ಸ್ಯಾಂಡಲ್ ವುಡ್ ನಟಿಯೊಬ್ಬರ ಮೇಲೆ ಕ್ರಶ್ ಆಗಿತ್ತು ಎಂದು ಬಹಿರಂಗವಾಗಿದೆ. ಸ್ವತಃ ಸುದೀಪ್ ಅವರೇ ಈ ಸಿಹಿ ಸತ್ಯವನ್ನು ಹೇಳಿದ್ದಾರೆ…!
ಕಿಚ್ಚನಿಗೆ ನಟಿ ಮಾಲಾಶ್ರೀ ಮೇಲೆ ಕ್ರಶ್ ಆಗಿತ್ತತಂತೆ. ಅವರ ಎಲ್ಲಾ ಸಿನಿಮಾಗಳನ್ನು ನೋಡಲು ಥಿಯೇಟರ್ ಗೆ ಹೋಗ್ತಿದ್ದರಂತೆ…! ಇದನ್ನು ಶಿವರಾಜ್ ಕುಮಾರ್ ನಡೆಸಿಕೊಡುವ ಯಾರಿ ನಂ1 ಕಾರ್ಯಕ್ರಮದಲ್ಲಿ ಸುದೀಪ್ ಹೇಳಿದ್ದಾರೆ.