ಈ ಬಾರಿ ಆರ್ ಸಿಬಿ ಕಪ್ ಗೆದ್ದೇ ಗೆಲ್ಲುತ್ತೆ ಎಂಬ ನಿರೀಕ್ಷೆ ಇತ್ತು. ಈ ಸಲ ಕಪ್ ನಮ್ದೇ ಎಂಬ ಕೂಗು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದರೆ , ಆರ್ ಸಿಬಿ ಪ್ಲೇಆಪ್ ಹಂತಕ್ಕೂ ತಲುಪದೆ ಹೊರಬಂದಿದೆ. ಈಗೇನೇ ಇದ್ರು ಮುಂದಿನ ಸಲ ಕಪ್ ನಮ್ದೇ ಎಂಬ ನಿರೀಕ್ಷೆಯಷ್ಟೇ.

ಮುಂದಿನ ಸಲ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕಿದೆ ಎಂದು ನಾಯಕ ಕೊಹ್ಲಿಗೂ ಗೊತ್ತಾಗಿದೆ. ತಂಡವನ್ನು ಬಲ ಮಾಡುವ ಉದ್ದೇಶ ಹೊಂದಿದ್ದಾರೆ. ಈ ನಡುವೆ ಈ ಸೀಸನ್ ನಲ್ಲಿ, ಉತ್ತಮ ಬೌಲಿಂಗ್ ಮಾಡಿದ ಉಮೇಶ್ ಯಾದವ್, ಚಹಾಲ್ ಮತ್ತು ಸಿರಾಜ್ ಅವರು ಮುಂದಿನ ಸಲವೂ ತಂಡದಲ್ಲಿ ಉಳಿದುಕೊಳ್ಳಲಿದ್ದಾರೆ ಎಂದು ಸೂಚ್ಯವಾಗಿ ಹೇಳಿದ್ದಾರೆ. ಜೊತೆಗೆ ಎ ಬಿ ಡಿವಿಲಿಯರ್ಸ್ ಅವರನ್ನಂತೂ ಕೈ ಬಿಡುವ ಪ್ರಮಯವೇ ಇಲ್ಲ.







