ಕಾವೇರಿ ವಿಚಾರದ ಬಗ್ಗೆ ಮಾತಾನಾಡಿ ಕನ್ನಡಿಗರ ಮನಗೆದ್ದಿದ್ದ ಕಾಲಿವುಡ್ ನಟ ಸಿಂಬು ಈಗ ಮತ್ತೊಮ್ಮೆ ಜನ ಮನ ಗೆದ್ದಿದ್ದಾರೆ.
ಮೃತಪಟ್ಟ ತನ್ನ ಅಭಿಮಾನಿಯ ಪೋಸ್ಟರ್ ಅಂಟಿಸುವ ಮೂಲಕ ಸಿಂಬು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಿಂಬು ಅವರ ಅಪ್ಪಟ ಅಭಿಮಾನಿ ಮದನ್ ಕಳೆದ ವಾರ ಚೆನ್ನೈನಲ್ಲಿ ಮೃತಪಟ್ಟಿದ್ದರು. ಮದನ್ ಸಾವನ್ನಪ್ಪಿದ ಸಮಯದಲ್ಲಿ ಸಿಂಬು ಮಣಿರತ್ನಂ ನಿರ್ದೇಶನದ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದರು. ಹಾಗಾಗಿ ಮದನ್ ಸಾವನ್ನಪ್ಪಿದ ವಿಷಯ ಸಿಂಬುಗೆ ತಿಳಿದಿರಲಿಲ್ಲ.

ಸಿಂಬು ತನ್ನ ಶೂಟಿಂಗ್ ಮುಗಿಸಿ ರಾತ್ರಿ ಕಾರಿನಲ್ಲಿ ಪ್ರಯಾಣಿಸುವಾಗ ಮದನ್ ಗೆಳೆಯರು ರಸ್ತೆ ಬಳಿ ಆತನ ಪೋಸ್ಟರ್ ಅಂಟಿಸುತ್ತಿದ್ದರು. ಅದನ್ನು ಗಮನಿಸಿದ ಸಿಂಬು ಕೂಡಲೇ ಕಾರಿನಿಂದ ಇಳಿದು ತಾನೂ ಅಭಿಮಾನಿಯ ಪೋಸ್ಟರ್ ಅಂಟಿಸಿದರು. ಸಿಂಬು ಅವರ ಈ ಕೆಲಸ ಜನರಿಗೆ ತುಂಬಾ ಇಷ್ಟವಾಗಿದೆ.







