ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಎ ಬಿ ಡಿವಿಲಿಯರ್ಸ್ ತಮ್ಮ 14 ವರ್ಷಗಳ ಸುಧೀರ್ಘ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿರುವುದು ಈಗಾಗಲೇ ನಿಮಗೆ ಗೊತ್ತಿದೆ.
ಎಬಿಡಿಯ ಈ ದಿಢೀರ್ ನಿರ್ಧಾರದ ಹಿಂದೆಯೂ ಅವರ ತ್ಯಾಗ ಮನೋಭಾವ ಹಾಗೂ ದ. ಆಫ್ರಿಕಾದ ಕ್ರಿಕೆಟ್ ಭವಿಷ್ಯದ ಕುರಿತ ಯೋಚನೆ ಇದೆ.
ಎಬಿಡಿ ಬೇರೆಯವರಿಗೆ ಅವಕಾಶ ನೀಡುವ ಉದ್ದೇಶದಿಂದ ಅಂತರಾಷ್ಟ್ರೀಯ ಕ್ರಿಕೆಟಿಗೆ ಗುಡ್ ಬೈ ಹೇಳಿದ್ದಾರೆ.
‘ಈ ಕ್ಷಣದಿಂದಲೇ ಅಂತರಾಷ್ಟ್ರೀಯ ಕ್ರಿಕೆಟಿನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ. 114 ಟೆಸ್ಟ್ , 228 ಏಕದಿನ ಹಾಗೂ 78 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ ನಂತರ ಇತರರಿಗೆ ಅವಕಾಶ ಮಾಡಿಕೊಡಲು ಸೂಕ್ತ ಸಮಯ ಎಂದು ಟ್ವಿಟ್ಟರ್ ನಲ್ಲಿ ಪ್ರಕಟಿಸಿದ ವೀಡಿಯೋದಲ್ಲಿ ತಿಳಿಸಿದ್ದಾರೆ.
34 ವರ್ಷದ ಎಬಿಡಿ ಭಾರತದಲ್ಲೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಅದರಲ್ಲಿಯೂ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಪರ ಆಡುವ ಎಬಿಡಿ ಕನ್ನಡಿಗರ ಮನೆಮಗ ಆಗಿದ್ದಾರೆ.
2004 ರ ಡಿ 17 ರಂದು ಪೋರ್ಟ್ ಎಲಿಜಬೆತ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದರು.
ಏಕದಿನ ಕ್ರಿಕೆಟ್ ನಲ್ಲಿ ಅತಿವೇಗದ ಶತಕ (31 ಎಸೆತ) ಹಾಗೂ ಅತಿವೇಗದ ಅರ್ಧಶತಕ (16 ಎಸೆತ) ಅತಿವೇಗದ 150(64ಎಸೆತ) ಸೇರಿದಂತೆ ಹತ್ತಾರು ದಾಖಲೆಗಳು ಎಬಿಡಿ ಹೆಸರಲ್ಲಿದೆ.