ಕನ್ನಡಿಗ ಕೆ ಎಲ್ ರಾಹುಲ್ ಟೀಂ ಇಂಡಿಯಾದಲ್ಲಿ ಹೊಸ ಜವಬ್ದಾರಿ ನಿಭಾಯಿಸಲು ಸಿದ್ಧರಾಗಿದ್ದಾರೆ.
ಐಪಿಎಲ್ ಸೀಸನ್ 11ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿದ್ದರೂ ರಾಹುಲ್ ಮಿಂಚಿದ್ದಾರೆ. 659 ರನ್ ಗಳಿಸಿದ ರಾಹುಲ್ ವಿಕೆಟ್ ಕೀಪರ್ ಆಗಿಯೂ ತಂಡಕ್ಕೆ ನೆರವಾದರು. 14 ಪಂದ್ಯಗಳಿಂದ 10 ಕ್ಯಾಚ್ ಹಾಗೂ 1ಸ್ಟಂಪ್ ಮೂಲಕ 11ವಿಕೆಟ್ ಕಬಳಿಸಿದ್ದಾರೆ.
ಬ್ಯಾಟಿಂಗ್ ಮತ್ತು ಕೀಪಿಂಗ್ ಎರಡರಲ್ಲೂ ತಂಡಕ್ಕೆ ನೆರವಾಗಬಲ್ಲ ಕೆ ಎಲ್ ರಾಹುಲ್ ಸೀಮಿತ ಓವರ್ ಗಳ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪಿಂಗ್ ಜವಬ್ದಾರಿ ಹೊರಲು ಸಜ್ಜಾಗಿರುವುದಾಗಿ ತಿಳಿಸಿದ್ದಾರೆ.
2019ರ ವಿಶ್ವಕಪ್ ಬಳಿಕ ಮಾಜಿ ನಾಯಕ , ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ. ಆದ್ದರಿಂದ ಮುಂದೆ ಟೀಂ ಇಂಡಿಯಾದಲ್ಲಿ ಕಾಯಂ ವಿಕೆಟ್ ಕೀಪರ್ ಯಾರು ಎಂಬ ಪ್ರಶ್ನೆಗೀಗ ಕನ್ನಡಿಗ ರಾಹುಲ್ ಉತ್ತರವಾಗಿ ನಿಂತಿದ್ದಾರೆ.
ಧೋನಿಗೆ ಮುನ್ನ ಕನ್ನಡಿಗರೇ ಆದ ರಾಹುಲ್ ದ್ರಾವಿಡ್ ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್ ಆಗಿದ್ದರು. ಇದೀಗ ಮತ್ತೆ ಕನ್ನಡಿಗರೇ ವಿಕೆಟ್ ಕೀಪರ್ ಆಗುವ , ಅದರಲ್ಲೂ ‘ರಾಹುಲ್ ‘ ಎಂಬ ಹೆಸರಿನವರೇ ವಿಕೆಟ್ ಕೀಪರ್ ಆಗುವುದು ವಿಶೇಷವೇ ಆಗಿದೆ.
ಆದರೆ, ಕೆ.ಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ಹೆಚ್ಚಿನ ಹೊಣೆ ಹೊತ್ತರೆ ಯುವ ಆಟಗಾರರಾದ ರಿಷಬ್ ಪಂತ್ , ಇಶಾನ್ ಕಿಶಾನ್ ಅವರು ಟೀಂ ಇಂಡಿಯಾದಲ್ಲಿ ಕಾಯಂ ಸ್ಥಾನ ಪಡೆಯುವುದು ಕಷ್ಟವಾಗಬಹುದು. ಇಲ್ಲ ಬ್ಯಾಟ್ಸಮನ್ ಗಳಾಗಿ ಮಾತ್ರ ತಂಡಕ್ಕೆ ಸೇರ್ಪಡೆಗೊಳ್ಳಬಹುದು.