ಮಾಜಿ ಚಾಂಪಿಯನ್ ಗಳಾದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಐಪಿಎಲ್ 11ನೇ ಆವೃತ್ತಿಯಲ್ಲಿ ಫೈನಲ್ ಪ್ರವೇಶಕ್ಕಾಗಿ ಇಂದು ಸೆಣೆಸಲಿವೆ.
ಈಗಾಗಲೇ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್ ಪ್ರವೇಶಿಸಿದೆ.
ಮೊದಲ ಪ್ಲೇ ಆಫ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಚೆನ್ನೈ ಫೈನಲ್ ಗೆ ಲಗ್ಗೆ ಇಟ್ಟಿದೆ. ಮೊದಲು ಪ್ಲೇ ಆಫ್ ನಲ್ಲಿ ಸೋತ ಸನ್ ರೈಸರ್ಸ್ ಎರಡನೇ ಪ್ಲೇ ಆಫ್ ನಲ್ಲಿ ರಾಜಸ್ಥಾನ್ ವಿರುದ್ಧ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಫೈನಲ್ ಪ್ರವೇಶಕ್ಕಾಗಿ ಹೋರಾಟ ನಡೆಯಲಿದೆ.
ನೈಟ್ ರೈಡರ್ಸ್ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಸಮಬಲ ಹೊಂದಿದೆ. ಸನ್ ರೈಸರ್ಸ್ ಗೆ ಬೌಲರ್ ಗಳೇ ಪ್ರಮುಖ ಅಸ್ತ್ರ.
ಕೋಲ್ಕಾತ್ತಾಕ್ಕೆ ನಾಯಕ ದಿನೇಶ್ ಕಾರ್ತಿಕ್ , ಕ್ರಿಸ್ ಲಿನ್ , ಕನ್ನಡಿಗ ರಾಬಿನ್ ಉತ್ತಪ್ಪ , ಆ್ಯಂಡ್ರೆ ರಸೆಲ್ ಅವರ ಬ್ಯಾಟಿಂಗ್ ಬಲವಿದೆ. ಆದರೆ ಹೈದರಾಬಾದ್ ಬ್ಯಾಟಿಂಗ್ ನಲ್ಲಿ ನೆಚ್ಚಿಕೊಂಡಿರುವುದು ನಾಯಕ ವಿಲಿಯಮ್ಸನ್ ಹಾಗೂ ಶಿಖರ್ ಧವನ್ ಅವರನ್ನು ಮಾತ್ರ.
ಇಲ್ಲಿಯವರೆಗೆ ಎರಡು ತಂಡಗಳು ಒಟ್ಟಾರೆ 14ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಕೋಲ್ಕತ್ತಾ 9ಬಾರಿ ಹೈದರಾಬಾದ್ 5 ಬಾರಿ ಗೆದ್ದಿವೆ.