ನಕಲಿ ಗುರುತಿನ ಚೀಟಿ ಪ್ರಕರಣದಿಂದ ಮುಂದೂಡಲ್ಪಟ್ಟಿದ್ದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಇಂದು ನಡೆಯಿತು.
ಆರ್ ಆರ್ ನಗರ ವಾಸಿ ಆಗಿರುವ ಅನೇಕ ನಟ ನಟಿಯರು ಮತ ಚಲಾಯಿಸಿದರು.
ನಟಿ ಅಮೂಲ್ಯ ಅವರ ಮಾವ ರಾಮಚಂದ್ರ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಮೌಂಟ್ ಕಾರ್ಮೆಲ್ ಸ್ಕೂಲಿಗೆ ಬಂದು ಶಿಲ್ಪಾ ಮತ್ತು ಗಣೇಶ್ ಮತದಾನ ಮಾಡಿದರು.
ನಟಿ ಅಮೂಲ್ಯ ಅವರು ತನ್ನ ಕುಟುಂಬದೊಂದಿಗೆ ಬಂದು ಮತ ಚಲಾಯಿಸಿದರು.
ಅವಿನಾಶ್ ಮತ್ತು ಮಾಳವಿಕ ದಂಪತಿ ಸೇರಿದಂತೆ ಅನೇಕ ನಟ-ನಟಿಯರು ಆರ್ ಆರ್ ನಗರ ಕ್ಷೇತ್ರದಲ್ಲಿ ಮತಚಲಾಯಿಸಿದ್ದಾರೆ.