ಝೀ ಕನ್ನಡ ವಾಹಿನಿಯ ಮೂಲಕ ಇಂದಿನಿಂದ ಪ್ರತಿ ಸೋಮವಾರ- ಶುಕ್ರವಾರ ಸಂಜೆ 7 ಗಂಟೆಗೆ ‘ಕಮಲಿ’ ನಿಮ್ಮ ಮನೆಗೆ ಬರುತ್ತಿದ್ದಾಳೆ.
ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಈ ಧಾರವಾಹಿ ಮೂಡಿ ಬರುತ್ತಿದೆ. ಸತ್ವ ಮೀಡಿಯಾ ಪ್ರೊಡಕ್ಷನ್ಸ್ ನವರು ಇದಕ್ಕೆ ಬಂಡವಾಳ ಹಾಕಿದ್ದಾರೆ. ರೋಹಿತ್ ಕುಮಾರದ ಸಹ ನಿರ್ಮಾಪಕರು.
ಓದುವ ಕಮಲಿಯ ಆಸೆ ಬೆಂಕಿಗೆ ಬಲಿಯಾಯಿತು. ಆದರೆ, ಆಗಲ್ಲ ಎಂದು ಸುಮ್ಮನೇ ಕೈಕಟ್ಟಿ ಕುಳಿತವಳಲ್ಲ ಈ ಕಮಲಿ. ಛಲ ಬಿಡದೆ , ಕೆಸರಿನಲ್ಲಿ ಅರಳಿದ ಕಮಲಿಯ ಕಥೆಯಿದು.
ಸೋಮವಾರದಿಂದ ಶುಕ್ರವಾರದವರೆಗೆ ಒಂದೊಳ್ಳೆ ಸಂದೇಶ,ಮನರಂಜನೆ ಜೊತೆಗೆ ಸಂಜೆ 7 ಗಂಟೆಗೆ ನಿಮ್ಮ ಮನೆಗೆ ಬರುವ ಕಮಲಿಯನ್ನು ಸ್ವಾಗತಿಸಿ. ಈ ಒಂದೊಳ್ಳೆ ಕೌಟುಂಬಿಕ ಧಾರವಾಹಿಯನ್ನು ನೀವು ಮಿಸ್ ಮಾಡ್ದೇ ನೋಡ್ತೀರಲ್ವಾ?