ಪತ್ನಿ ಐಶ್ವರ್ಯ ವಿರುದ್ಧ ಅಭಿಷೇಕ್ ದೂರು…!

Date:

ಪತ್ನಿ ಐಶ್ವರ್ಯ ರೈ ವಿರುದ್ಧ ನಟ ಅಭಿಷೇಕ್ ದೂರು ನೀಡಿದ್ದಾರೆ.
ಅದು ಪೊಲೀಸರಿಗೆ ನೀಡಿದ ದೂರಲ್ಲ. ಅಭಿಮಾನಿಗಳಿಗೆ ನೀಡಿದ ದೂರು…! ದೂರು ನೀಡಿದ್ದು ಟ್ವೀಟರ್‌ನಲ್ಲಿ…!
ಹೌದು ಅಭಿಷೇಕ್ ಬಚ್ಚನ್ ಇತ್ತೀಚಿಗೆ ಟ್ವಿಟ್ಟರಿನಲ್ಲಿ ಕೋಸುಗಡ್ಡೆ(broccoli) ಬಗ್ಗೆ ಟ್ವೀಟ್ ಮಾಡಿದ್ದರು. “ಯಾಕೆ? ಯಾಕೆ ಯಾರಾದರೂ ಈ ರೀತಿ ಮಾಡುತ್ತಾರೆ? ಯಾಕೆ? ನನ್ನ ಮಾತಿನ ಅರ್ಥ ಯಾರೂ ಕೋಸುಗಡ್ಡೆ ಇಷ್ಟಪಡುತ್ತಾರೆಂದು ಇದನ್ನು ಮಾಡುತ್ತಾರೆ” ಎಂದು ಅಭಿಷೇಕ್ ಬಚ್ಚನ್ ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಮಾಡಿದ ಮರುದಿನವೇ ಐಶ್ವರ್ಯ ತನ್ನ ಪತಿ ಅಭಿಷೇಕ್ ಬಚ್ಚನ್‍ಗಾಗಿ ಕ್ಯೂನೋ ಸಲಾಡ್ ಮಾಡಿಕೊಟ್ಟರು. ಕ್ಯೂನೋ ಸಲಾಡ್‍ನಲ್ಲಿ ಟೋಮ್ಯಾಟೋ ಹಾಗೂ ಕೋಸುಗಡ್ಡೆ ಕೂಡ ಇತ್ತು. ತಕ್ಷಣ ಅಭಿಷೇಕ್ ಬಚ್ಚನ್ ಆ ಸಲಾಡ್ ಫೋಟೋವನ್ನು ತೆಗೆದು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡರು.
ಅಭಿಷೇಕ್ ಸಲಾಡ್ ಫೋಟೋ ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ “ಬಹುಶಃ ನನ್ನ ಪತ್ನಿ ನನ್ನ ಹಳೆಯ ಟ್ವೀಟ್ ಓದಿರಬಹುದು” ಎಂದು ಹೇಳಿ ಟ್ವೀಟ್ ಮಾಡುವ ಮೂಲಕ ಐಶ್ವರ್ಯ ವಿರುದ್ಧ ಅಭಿಮಾನಿಗಳಿಗೆ ದೂರು ನೀಡಿದ್ದಾರೆ.
ಐಶ್ವರ್ಯ ರೈ ಟ್ವಿಟ್ಟರ್ ಬಳಸದಿದ್ದರೂ ತನ್ನ ಪತಿಯ ಟ್ವಿಟ್ಟರ್ ಹಾಗೂ ಟ್ವೀಟ್ ಮೇಲೆ ಯಾವಾಗಲೂ ಗಮನವಿಡುತ್ತಾರೆ. ಸದ್ಯ ಅಭಿಷೇಕ್ ಅವರ ಈ ಟ್ವೀಟ್‍ಗೆ ಸಾಕಷ್ಟು ಮಂದಿ ಹಾಸ್ಯವಾಗಿ ತೆಗೆದುಕೊಂಡು ರೀ-ಟ್ವೀಟ್ ಮಾಡಿದ್ದಾರೆ.

ಸದ್ಯ ಅಭಿಷೇಕ್ ಬಚ್ಚನ್ ಈಗ ಅನುರಾಗ್ ಕಶ್ಯಪ್ ನಿರ್ದೇಶನದ ‘ಮನ್ ಮರ್ಜಿಯಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಭಿಷೇಕ್‍ಗೆ ನಾಯಕಿಯಾಗಿ ತಾಪ್ಸಿ ಪೊನ್ನು ಕಾಣಿಸುಕೊಳ್ಳುತ್ತಿದ್ದಾರೆ. 2 ವರ್ಷಗಳ ನಂತರ ಅಭಿಚೇಕ್ ಮನ್ ಮರ್ಜಿಯಾ ಚಿತ್ರದ ಮೂಲಕ ಹಿಂತಿರುಗುತ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...