ಮುಸ್ಲಿಮರು ಒಪ್ಪಿದ್ರೆ ಕಳೆದ ಬಾರಿಯಂತೆ ಈ ಬಾರಿಯೂ ಇಫ್ತಾರ್ ಕೂಟ ಮಾಡಬೇಕೆಂದುಕೊಂಡಿದ್ದೇವೆ. ಮುಸ್ಲಿಂ ನಾಯಕರು ಒಪ್ಪಿದರೆ ಸತ್ಕಾರ ಕೂಟ ಮಾಡ್ತೀನಿ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮುಸ್ಲಿಂರು ಈ ವಾರಿ ಇಫ್ತಾರ್ ಕೂಟಕ್ಕೆ ಅಷ್ಟಾಗಿ ಉತ್ಸಾಹ ತೋರಿಸುತ್ತಿಲ್ಲ. ಇಫ್ತಾರ್ ಕೂಟ ಕಳೆದ ಬಾರಿ ಚರ್ಚೆಯಾಗಿತ್ತು. ಮೂರ್ತಿ ಇರುವಲ್ಲಿ ಕಾರ್ಯಕ್ರಮ ಆಯೋಜಿಸಲು ಮುಸ್ಲಿಮರು ಒಪ್ಪುತ್ತಿಲ್ಲ. ಒಪ್ಪಿದ್ರೆ ಅಂದುಕೊಂಡಂತೆಯೇ ಗೋವಿಂದ ಕಲ್ಯಾಣ ಮಂಟಪದಲ್ಲಿ ಸತ್ಕಾರ ಕೂಟ ಆಯೋಜಿಸುವ ಆಲೋಚನೆಯಿದೆ ಎಂದು ಶ್ರೀಗಳು ಹೇಳಿದ್ದಾರೆ.