ಕಾವೇರಿ ವಿಚಾರದಲ್ಲಿ ನಟ ರಜನಿಕಾಂತ್ ಕರ್ನಾಟಕದ ವಿರುದ್ಧ ನೀಡಿದ ಹೇಳಿಕೆ ಪರಿಣಾಮ ಅವರ ಅಭಿನಯದ ‘ಕಾಲ’ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗ್ತಿದೆ. ಈ ವಿರೋಧಕ್ಕೆ ಅತ್ತ ತಮಿಳು ಸಿನಿಕಲಾವಿದರು ಪ್ರತಿ ವಿರೋಧ ತೋರುತ್ತಿದ್ದಾರೆ.
ಈಗ ನಟ ವಿಶಾಲ್ ರಜನಿಕಾಂತ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
‘ಕಾವೇರಿ ವಿಚಾರದಲ್ಲಿ ನಟ ರಜನಿಕಾಂತ್ ಜವಾಬ್ದಾರಿಯುತ ಮಾತುಗಳನ್ನಾಡಿದ್ದಾರೆ. ಅವರು ಮುಕ್ತವಾಗಿ ಮಾತಾಡಿದ್ದು, ಅವರ ಅಭಿವ್ಯಕ್ತಿ ಸ್ವಾತಂತ್ರ್ಯ. ಅದಕ್ಕೆ ವಿರೋಧವಾಗಿ ಕಾಲ ಬಿಡುಗಡೆಯನ್ನು ನಿಲ್ಲಿಸುವುದು ಸರಿಯಲ್ಲ. ನಾವೆಲ್ಲಾ ಭಾರತೀಯರು ಎಂದು ವಿಶಾಲ್ ಟ್ವೀಟ್ ಮಾಡಿದ್ದಾರೆ.
Wat Rajini sir spoke bout Cauvery issue is called responsibility n freedom of https://t.co/LHXXpG78C3 cn they stop #kaala release n Karnataka in retaliation.i sincerely hope the Karnataka film chamber and fellow brothers resolve this issue.we all r Indians https://t.co/VdsL1fQOXw
— Vishal (@VishalKOfficial) May 30, 2018