ಇತ್ತೀಚಿನ ದಿನಗಳಲ್ಲಿ ಪೌರಾಣಿಕ ಧಾರವಾಹಿಗಳು ಕಡಿಮೆ ಆಗುತ್ತಿವೆ. ಆದರೆ, ಕಲರ್ಸ್ ಕನ್ನಡ ವಾಹಿನಿಯು ವಿಭಿನ್ನ ಪ್ರಯೋಗಗಳ ಮೂಲಕ ಹೊಸತನದೊಂದಿಗೆ ವೀಕ್ಷಕರ ಮುಂದೆ ಬರುವಲ್ಲಿ ಯಶಸ್ವಿಯಾಗಿದೆ.
ಈಗಾಗಲೇ ಕಲರ್ಸ್ ವಾಹಿನಿಯ ‘ಶನಿ’ ಧಾರವಾಹಿ ದೊಡ್ಡಮಟ್ಟಿನ ಯಶಸ್ಸುಗಳಿಸಿದೆ. ಅಭಿಮಾನಿಗಳು ಶನಿಯನ್ನು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಇದೀಗ ಅಷ್ಟೇ ಪ್ರಭಾವ ಬೀರುವ ಧಾರಾವಾಹಿಯೊಂದನ್ನು ಪ್ರಸಾರ ಮಾಡಲಿದೆ.
ಮಹಾಕಾಳಿ ಧಾರವಾಹಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಪ್ರತಿ ವಾರಾಂತ್ಯದಲ್ಲಿ ಒಂದು ಗಂಟೆಗಳ ಕಾಲ ಮಹಾಕಾಳಿ ಪ್ರಸಾರವಾಗಲಿದೆ.
ಶನಿ ಧಾರವಾಹಿಗೂ ಮಹಾಕಾಳಿ ಧಾರವಾಹಿಗೂ ಸಾಕಷ್ಟು ನಂಟಿದೆ.
ಶನಿ ಧಾರವಾಹಿಯ ನಿರ್ದೇಶಕ ರಾಘವೇಂದ್ರ ಹೆಗ್ಗಡೆ ಅವರೇ ಮಹಾಕಾಳಿಯನ್ನೂ ನಿರ್ದೇಶಿಸುತ್ತಿದ್ದಾರೆ. ಇವರು ಜಗ್ಗುದಾದ ಸಿನಿಮಾ ನಿರ್ದೇಶಿಸಿ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿರೋ ನಿರ್ದೇಶಕರು.
ಶನಿ ಧಾರವಾಹಿಯ ಶಿವನ ಪಾತ್ರಧಾರಿ ಅರ್ಜುನ್ ಮಹಾಕಾಳಿಯಲ್ಲೂ ಶಿವ….!ಶನಿ ಧಾರವಾಹಿಯ ಇಂದ್ರ ಮತ್ತು ಬ್ರಹ್ಮನ ಪಾತ್ರದಾರಿಗೂ ಸಹ ಮಹಾಕಾಳಿಯಲ್ಲಿ ಅದೇ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.