ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ತಮ್ಮ ಹೆಸರಿನ ನಕಲಿ ಖಾತೆಯಿಂದ ಅವಹೇಳನಕಾರಿ ಪೋಸ್ಟ್ ಆಗಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಗಮನಕ್ಕೆ ಬಂದಿದ್ದು ಅವರು ಫುಲ್ ಗರಂ ಆಗಿದ್ದಾರೆ.
ದರ್ಶನ್ ಅವರ ಹೆಸರಿನ ಫೇಸ್ ಬುಕ್ ಅಕೌಂಟ್ ನಿಂದ ಎಚ್ ಡಿಕೆ ವಿರುದ್ಧ ಸರಣಿ ಟ್ವೀಟ್ ಗಳು ಬರಲು ಶುರುವಾಗಿದ್ದು, ಇದು ದರ್ಶನ್ ಅವರ ಗಮನಕ್ಕೆ ಬರುತ್ತಿದ್ದಂತೆ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
‘ಇತ್ತೀಚೆಗೆ ತಿಳಿದುಬಂದಿರುವಂತೆ ನನ್ನ ಹೆಸರಲ್ಲಿ ಕೆಲವು ಕಿಡಿಗೇಡಿಗಳ ಅನೇಕ ನಕಲಿ ಖಾತೆಗಳಿವೆ. ಈ ಖಾತೆಗಳಿಂದ ಕೆಲವು ವ್ಯಕ್ತಿಗಳ ಮೇಲೆ ಅವಹೇಳನಕಾರಿ ಹೇಳಿಕೆಗಳು ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ. ಸೈಬರ್ ಕ್ರೈಂ ಡಿಪಾರ್ಟ್ಮೆಂಟ್ ಈ ರೀತಿ ಸೋಶಿಯಲ್ ಮೀಡಿಯಾ ದುರ್ಬಳಕೆ ಮಾಡಿದವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳುವುದಾಗಿ ಹೇಳಿದೆ. ದಯಮಾಡಿ ಯಾರೂ ಇಂತಹ ಕೆಲಸಗಳಲ್ಲಿ ತೊಡಗಬೇಡಿ ಎಂದು ಕಳಕಳಿಯ ವಿನಂತಿ’ ಅಂತ ದರ್ಶನ್ ಎಫ್ ಬಿ ಯಲ್ಲಿ ಪೋಸ್ಟ್ ಮಾಡಿದ್ದಾರೆ.