ಸಸಿ ನೆಟ್ಟು ಪೋಷಿಸಲು ಪ್ರೋತ್ಸಾಹಿಸಿ, ಪರಿಸರ ರಕ್ಷಣೆ ಮಾಡೋ ನಿಟ್ಟಿನಲ್ಲಿ ಹರಿಯಾಣ ಸರ್ಕಾರ ಯೋಜನೆಯೊಂದನ್ನು ರೂಪಿಸಿದೆ.
6-12 ನೇ ತರಗತಿ ವಿದ್ಯಾರ್ಥಿಗಳು ತಮ್ಮ ಮನೆಯಲಗಕಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಟ್ಟರೆ, ಒಂದು ಗಿಡಕ್ಕೆ ₹50 ನೀಡಲು ಹರಿಯಾಣದ ಮನೋಹರ್ ಲಾಲ್ ಕಟ್ಟರ್ ಸರ್ಕಾರ ಮುಂದಾಗಿದೆ.
ಇಲ್ಲಿ 6-12 ನೇ ತರಗತಿ ವಿದ್ಯಾಭ್ಯಾಸ ಮಾಡ್ತಿರೋ 22ಲಕ್ಷ ವಿದ್ಯಾರ್ಥಿಗಳಿದ್ದಾರೆ. ಶಿಕ್ಷಣ ಇಲಾಖೆ ನೇತೃತ್ವದಲ್ಲಿ ಈ ಯೋಜನೆ ಜುಲೈ 6 ರಿಂದ ಜಾರಿಗೆ ಬರಲಿದೆ. ಒಟ್ಟು 3 ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಿದೆ.