ಮೊಗ್ಗಿನ ಮನಸ್ಸು ಚೆಲುವೆ ರಾಧಿಕ ಪಂಡಿತ್ ರಾಕಿಂಗ್ ಸ್ಟಾರ್ ಯಶ್ ಅವರನ್ನು ಮದ್ವೆಯಾದ ಬಳಿಕ ಚಿತ್ರರಂಗದಿಂದ ತಾತ್ಕಾಲಿಕವಾಗಿ ದೂರವಿದ್ದರು. ಇದೀಗ ಸಿನಿಮಾರಂಗಕ್ಕೆ ರೀ ಎಂಟ್ರಿಕೊಡ್ತಿದ್ದಾರೆ.
ರಾಧಿಕ ಪಂಡಿತ್ ನಾಯಕಿಯಾಗಿಯೇ ಚಿತ್ರರಂಗಕ್ಕೆ ವಾಪಾಸ್ಸಾಗುತ್ತಿದ್ದು, ರಂಗಿತರಂಗ ಖ್ಯಾತಿಯ ನಿರೂಪ್ ಬಂಡಾರಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಧಿಕ ಮತ್ತು ನಿರೂಪ್ ನಟಿಸಲಿರುವ ಹೊಸ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಪ್ರಿಯಾ ವಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.