ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅಭಿನಯದ ‘ಮಫ್ತಿ’ ಸಿನಿಮಾ ರಿಲೀಸ್ ಆಗಿ ಆರು ತಿಂಗಳಾಗಿದೆ. ಮಫ್ತಿ ಯಶಸ್ಸಿನ ನಂತರ ಶ್ರೀಮುರುಳಿ ಒಂದೇ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ಭರ್ಜರಿ ನಿರ್ದೇಶಕ ಚೇತನ್ ಆ್ಯಕ್ಷನ್ ಕಟ್ ಹೇಳ್ತಾರೆ ಎಂಬುದು ಗೊತ್ತಾಗಿತ್ತು. ಆದ್ರೆ, ಚಿತ್ರದ ಹೆಸರೇನು? ನಾಯಕಿ ಯಾರು? ಎಂದು ತಿಳಿದಿರಲಿಲ್ಲ.
ತಮ್ಮ ಹೊಸ ಚಿತ್ರದ ಶೀರ್ಷಿಕೆ ಬಗ್ಗೆ ಕೇಳಿದಾಗ ಶ್ರೀಮುರುಳಿ ಜೋರು ಎಂಬ ಪದದ ಇನ್ನೊಂದು ಪರ್ಯಾಯ ಪದ ನಮ್ಮ ಸಿನಿಮಾದ ಶೀರ್ಷಿಕೆ ಆಗುತ್ತೆ ಎಂದು ಸೂಚನೆ ನೀಡಿದ್ದರು. ಈಗ ಮುರುಳಿಯ ಹೊಸ ಸಿನಿಮಾಕ್ಕೆ ‘ರಭಸ’ ಎಂಬ ಹೆಸರಿಡಲಾಗಿದೆ ಎಂದು ತಿಳಿದಿದೆ. ಹಾಗೇ ಚಿತ್ರಕ್ಕೆ ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗಿದ್ದು, ಜುಲೈ25ರಿಂದ ಚಿತ್ರೀಕರಣ ಆರಂಭವಾಗಲಿದೆ.