ಬೆಳ್ಳಿತೆರೆಗೆ ಬಂದ ‘ಕಿರಿ’ಯ ನಿರ್ದೇಶಕ…!

Date:

ಸ್ಯಾಂಡಲ್ ವುಡ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವ ಪ್ರತಿಭೆಗಳು ಎಂಟ್ರಿ ಕೊಡಿತ್ತಿದ್ದಾರೆ.‌ ಕನ್ನಡ ಚಿತ್ರರಂಗ ಹೊಸತನಕ್ಕೆ ಸಾಕ್ಷಿಯಾಗುತ್ತಿದೆ. ಕನ್ನಡ ಸಿನಿಮಾಗಳಲ್ಲಿ ಹೊಸ ಅಲೆ ಎದ್ದಿದೆ. ಕಿರುಚಿತ್ರಗಳ ಸಾಧಕ ಇದೀಗ ಬೆಳ್ಳಿತೆರೆಗೆ ಎಂಟ್ರಿ‌ಕೊಡ್ತಿದ್ದಾರೆ.


ಇವರ ಹೆಸರು ‘ಸಲ್ಮಾನ್’.‌ ಮಾಸ್ಟರ್ ಕಿಶನ್ ಬಳಿಕ ಸ್ಯಾಂಡಲ್ ವುಡ್‌ನ ಅತ್ಯಂತ ಕಿರಿಯ ವಯಸ್ಸಿನ ನಿರ್ದೇಶಕ ಎಂಬ ಖ್ಯಾತಿ ಇವರದ್ದು.
ಕಿರುಚಿತ್ರಗಳ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿರುವ 19 ವರ್ಷದ ಸಲ್ಮಾನ್ ಬೆಳ್ಳಿತೆರೆಯಲ್ಲಿ ತನ್ನ ಪ್ರತಿಭೆ ಅನಾವರಣ ಮಾಡಲು ಮುಂದಾಗಿದ್ದಾರೆ. ನಾನಾ ಭಾಷೆಗಳನ್ನು ಕರಗತ ಮಾಡಿಕೊಂಡಿರುವ ಕಿರುಚಿತ್ರಗಳ ಸಾಧಕ ‘ಅನಾಮದೇಯ’, ‘ಹಠ’, ‘ಸ್ಲೋ ಪಾಯಿಸನ್’ ‘ರೋಡ್ ಕಿಂಗ್’ , ‘ವಿಕಲ್ಪ’ ,’ನಾವು ಯಾರು ಬಲ್ಲಿರ’ ಎಂಬ ಕಿರುಚಿತ್ರಗಳ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ಹಿಡಿದಿದ್ದಾರೆ.


ಇದಲ್ಲದೆ, ಜಾಹಿರಾತು, ಆಲ್ಬಮ್ ಸಾಂಗ್ ಹಾಗೂ ನಾಟಕಗಳಲ್ಲೂ ತನ್ನ ಸಾಮಾರ್ಥ್ಯ ಸಾಬೀತುಪಡಿಸಿದ್ದಾರೆ.
ತಮ್ಮ ಇದುವರೆಗಿನ ಕಿರುಚಿತ್ರಗಳಿಗೆ ನಾಲ್ಕು ರಾಷ್ಟಪ್ರಶಸ್ತಿ‌ ಸೇರಿದಂತೆ ಹತ್ತಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.


ಗೋವಾ ಫಿಲಂ ಫೆಸ್ಟಿವಲ್ ನಲ್ಲಿ ಬೆಸ್ಟ್ ಮೂವಿ ಅವಾರ್ಡ್, ಯಂಗ್ ಡೈರೆಕ್ಟರ್ ಆಫ್ ಕರ್ನಾಟಕ, ಮಿನುಗುತಾರೆ ಕಲ್ಪನಾ ಪ್ರಶಸ್ತಿ, ಬೆಸ್ಟ್ ಡೈರೆಕ್ಟರ್ (ಹಂಸ ಟಿವಿ), ಸಮಾಜರತ್ನ ರಾಜ್ಯೋತ್ಸವ ಯುವ ನಿರ್ದೇಶಕ ಪ್ರಶಸ್ತಿ, ಬೆಸ್ಟ್ ಡೈರೆಕ್ಟರ್ ಎಸ್ ಜೆ ಸಿ ಪ್ರಶಸ್ತಿ ಮೊದಲಾದವು ಸಲ್ಮಾನ್ ಅವರನ್ನರಸಿ ಬಂದಿವೆ.


ಸಾಹಸ ಕಲಾವಿದರೊಬ್ಬರ ಮಗನಾಗಿರುವ ಸಲ್ಮಾನ್ ಅವರು ಸಚಿವ ಜಮೀರ್ ಅಹಮ್ಮದ್ ಅವರ ಜೀವನ ಕುರಿತ ಚಿತ್ರವೊಂದ‌ನ್ನು ಸಹ ಮಾಡಲು ಮುಂದಾಗಿದ್ದಾರೆ.


ಈಗ ‘ಕಾಲವನ್ನು ತಡೆಯೋರು ಇಲ್ಲ’ ಎಂಬ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡ್ತಿದ್ದಾರೆ. ಇದು ಯುವಕರು ಸೇರಿ ಮಾಡುತ್ತಿರುವ ಸಿನಿಮಾ. ಕುರಿಪ್ರತಾಪ್ ಮತ್ತು‌ ಮಲ್ಲೇಶ್ ಸಹ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ತಾಫ್ ಎಂಬ ಹೊಸ ಪ್ರತಿಭೆ ಚಿತ್ರದ ನಿರ್ಮಾಣ ಮತ್ತು ಮುಖ್ಯಭೂಮಿಕೆಯಲ್ಲಿ ನಟಿಸಲು ಸಿದ್ಧರಾಗಿದ್ದಾರೆ.


ರಾಹುಲ್ , ಪ್ರದೀಪ್, ಕಿರಣ್ ಸಂಜು ಸಂಭಾಷಣೆ ಮತ್ತು ಅಸೋಸಿಯೇಟ್ ಡೈರೆಕ್ಟರ್ ಆಗಿ ಜವಬ್ದಾರಿ ಹೊತ್ತಿದ್ದಾರೆ. ರವಿ ಕುಮಾರ್ ಕೋ ಡೈರೆಕ್ಟರ್ ಆಗಿಯೂ, ಸಂತೋಷ್, ಲಿಖಿತ್, ದರ್ಶನ್ ದಿಲೀಪ್, ಮೋದಿನ್, ದರ್ಶನ್ ಗೌಡ, ಪ್ರಶಾಂತ್, ಸಂಗಮೇಶ್ ಇಂಡೆ ಸಹಾಯಕ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ.‌

ಇನ್ನೊಂದು ಪ್ರಮುಖ ವಿಷ್ಯವೆಂದ್ರೆ ನಿರೂಪಕ ಮಂಜುನಾಥ್ ದಾವಣಗೆರೆ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನಿರೂಪಕರು ಸಿನಿಮಾ ರಂಗಕ್ಕೆ ಬರುತ್ತಿರುವುದು ಹೊಸತೇನಲ್ಲ. ಈಗಾಗಲೇ ಅನೇಕ ಹೆಸರಾಂತ ನಿರೂಪಕರು ಸಿನಿರಂಗ ಪ್ರವೇಶಿಸಿದ್ದಾರೆ. ಇದೀಗ ಬೆಣ್ಣೆ ನಗರಿಯ ಕುವರ ಮಂಜುನಾಥ್ ಅವರ ಸರದಿ. ಈ ಚಿತ್ರದಲ್ಲಿ ಮುದ್ದಾದ ಲವ್ವರ್ ಬಾಯ್ ಆಗಿ ಮಂಜು ನಟಿಸುತ್ತಾರೆ. ಈ ಸಿನಿಮಾದಲ್ಲಿ ಮಂಜು ನಾಯಕನಿಗೆ ಕಾಂಪಿಟೇಟರ್…!

http://tnit.magzian.com/manjunath-davanagere-anchor/

ಸ್ವರಾಜ್ ಎಕ್ಸ್ ಪ್ರೆಸ್ ನಲ್ಲಿ ನಿರೂಪಕರಾಗಿರುವ ದಾವಣಗೆರೆ ಹುಡುಗ ಮಂಜುನಾಥ್ ರೆಹಮಾನ್ ಹಾಸನ್ (ಟಿವಿ9 ರೆಹಮಾನ್) , ಶೀತಲ್ ಶೆಟ್ಟಿ ಅವರಂತೆ ಸಿನಿಮಾ ಕ್ಷೇತ್ರದಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಳ್ಳ ಬಹುದು. ಆದರೆ, ಸದ್ಯಕ್ಕೆ ಸುದ್ದಿವಾಚನ ಹಾಗೂ ಸಿನಿಮಾ ಎರಡನ್ನೂ ನಿಭಾಯಿಸಿಕೊಂಡು ಹೋಗಲಿದ್ದಾರೆ.


ಹೀಗೆ ಯುವ ತಂಡವೊಂದು ಒಂದೊಳ್ಳೆ ಸಿನಿಮಾ ಮಾಡಲು ಮುಂದಾಗಿದೆ. ಯೂಟರ್ನ್, ರಾಮ ರಾಮರೇ ಮೊದಲಾದ ವಿಭಿನ್ನ ,ಪ್ರಯೋಗಾತ್ಮಕ ಸಿನಿಮಾಗಳಂತೆ ಈ ಸಿನಿಮಾವೂ ಸಹ ವಿಶೇಷ ಕಥಾಂದರ ಹೊಂದಿದೆ. ಈ ಹೊಸ ಸಿನಿಮಾ ಹಾಗೂ ಯುವ ತಂಡಕ್ಕೆ ನಾವು ಆಲ್ ದಿ ಬೆಸ್ಟ್ ಹೇಳೋಣ…

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...