ಭಗ್ನಪ್ರೇಮಿಯೊಬ್ಬ 18 ವರ್ಷದ ಯುವತಿಗೆ ಮಾಲ್ ನಲ್ಲೇ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಗ್ರೇಟರ್ ನೊಯ್ಡಾದಲ್ಲಿ ನಡೆದಿದೆ.
ಕುಲ್ ದೀಪ್ ಸಿಂಗ್ ಆರೋಪಿ. ಪ್ರಿಯತಮೆಯನ್ನು ಕೊಂದ ಈತ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲೀಗ ಚಿಕಿತ್ಸೆ ಪಡೆಯುತ್ತಿದ್ದಾನೆ. ಪರಿಸ್ಥಿತಿ ಚಿಂತಾಜನಕವಾಗಿದೆ.
ನಿನ್ನೆ ಬೆಳಗ್ಗೆ 11.30 ರ ಸುಮಾರಿಗೆ ಕುಲ್ ದೀಪ್ ನಗರದ ಮಾಲ್ ಗೆ ಬಂದಿದ್ದಾನೆ .ಯುವತಿ ಅದೇ ಮಾಲ್ ನಲ್ಲಿ ಕೆಲಸ ಮಾಡ್ತಿದ್ದಳು. ಅವಳು ಮೇಲಿನ ಮಹಡಿಯಲ್ಲಿರೋ ಶೌಚಾಲಯಕ್ಕೆ ತೆರಳಿದಾಗ ಕುಲ್ ದೀಪ್ ಆಕೆಯನ್ನು ಎಳೆದಾಡಿ ನಾನಾ ಬಾರಿ ಚಾಕುವಿನಿಂದ ಇರಿದಿದ್ದಾನೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಬಳಿಕ ಆತ ಪರಾರರಿಯಾಗಲು ಯತ್ನಿಸಿದ್ದಾನೆ. ಪೊಲೀಸರು ನೋಡುತ್ತಿದ್ದಂತೆ ತಾನು ಸಹ ಚಾಕುವಿನಿಂದ ಇರಿದುಕೊಂಡಿದ್ದಾನೆ. ಕಸ್ನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.