No menu items!
19.6 C
Munich
Friday, May 1, 2026

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಗೆ ಕೇಂದ್ರದ ಆದೇಶ…! ಕರ್ನಾಟಕದ ಸದಸ್ಯರೇ ಇಲ್ಲ…!

Must read

ಕರ್ನಾಟಕದ ವಿರೋಧ ಮತ್ತು ಆತಂಕವನ್ನು ಲೆಕ್ಕಿಸದೆ ಕೇಂದ್ರ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಗೆ ಆದೇಶ ಹೊರಡಿಸಿದೆ. ಕರ್ನಾಟಕದ ಆಕ್ಷೇಪವನ್ನು ಲೆಕ್ಕಿಸದೇ ಈ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ಇದುವರೆಗೆ ತನ್ನ ಪ್ರತಿನಿಧಿಯ ಹೆಸರನ್ನು ಕಳುಹಿಸಿಲ್ಲ ಎಂಬ ನೆಪವೊಡ್ಡಿ ತಾನೇ 8 ಮಂದಿ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿದೆ. ಕೇಂದ್ರೀಯ ಜಲ ಆಯೋಗದ ಮುಖ್ಯ ಇಂಜಿನಿಯರ್ ನವೀನ್ ಕುಮಾರ್ ಸಮಿತಿಯ ಅಧ್ಯಕ್ಷರಾಗಿದ್ದಾರೆ.


ಕೇರಳ , ತಮಿಳುನಾಡು ,‌ಪುದುಚರಿಯ ನೀರಾವರಿ ಮುಖ್ಯ ಇಂಜಿನಿಯರ್ ಗಳು, ಹವಮಾನ ಇಲಾಖೆಯ ವಿಜ್ಞಾನಿ ಡಾ. ಎ ಮಹಾಪಾತ್ರ ,ಕೇಂದ್ರಿಯ ಜಲ ಆಯೋಗದ ಕೊಯಮತ್ತೂರು ಸಿ. ಅಂಡ್ ಎಸ್ ಆರ್ ಓ‌ ಮುಖ್ಯ ಇಂಜಿನಿಯರ್ ಎನ್ ಎಂ ಕೃಷ್ಣನುಣ್ಣಿ ,‌ಕೇಂದ್ರ ಸರ್ಕಾರದ ತೋಟಗಾರಿಕೆ ಆಯುಕ್ತ ಹಾಗೂ ಕೇಂದ್ರಿಯ ಜಲ ಆಯೋಗದ ಮುಖ್ಯ ಇಂಜಿನಿಯರ್ ಎ.ಎಸ್ ಗೋಯಲ್ ನಿಯಂತ್ರಣ ಸಮಿತಿ ಸದಸ್ಯರಾಗಿದ್ದಾರೆ.‌

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article