ಬೆಳೆಸಾಲ ಕೇಳಲು ಬ್ಯಾಂಕ್ ಗೆ ಬಂದ ರೈತರೊಬ್ಬರ ಪತ್ನಿಯನ್ನು ಭಾರತೀಯ ಸೆಂಟ್ರಲ್ ಬ್ಯಾಂಕ್ ಮ್ಯಾನೇಜರ್ ಒಬ್ಬ ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಬುಲ್ದಾನಾ ಜಿಲ್ಲೆಯ ಸೆಂಟ್ರಲ್ ಬ್ಯಾಂಕ್ ಶಾಖೆಯ ಆರೋಪಿ.
ತನ್ನ ಆಸೆಯನ್ನು ಪೂರೈಸುವುದಾದರೆ ವಿಶೇಷ ಪ್ಯಾಕೇಜ್ ನಡಿ ಬೆಳೆಸಾಲ ನೀಡಲಾಗುವುದು ಎಂದು ಮ್ಯಾನೇಜರ್ ರಾಜೇಶ್ ಹಿವಾಸೆ ತನ್ನ ಆಪ್ತ ಸಹಾಯಕನ ಕೈಯಲ್ಲಿ ಹೇಳಿ ಕಳುಹಿಸಿದ್ದ. ಇದಕ್ಕೆ ಸಂಬಂಧಿಸಿದಂತೆ ಮ್ಯಾನೇಜರ್ ಮತ್ತು ಸಹಾಯಕನ ವಿರುದ್ಧ ಪ್ರಕರಣ ದಾಖಲಾಗಿದೆ.
ರೈತ ಮತ್ತು ಆತನ ಪತ್ನಿ ಬ್ಯಾಂಕ್ ಗೆ ಬಂದು ಅರ್ಜಿ ಸಲ್ಲಿಸಿದ್ದರು. ಸಾಲ ನೀಡುವ ಪ್ರಕ್ರಿಯೆ ಪೂರ್ಣಗೊಂಡ ಮೇಲೆ ಮ್ಯಾನೇಜರ್ ರೈತನ ಖಾಸಗಿ ಮೊಬೈಲ್ ಗೆ ಕರೆಮಾಡಿ ಆತನ ಪತ್ನಿಜೊತೆ ಅಸಭ್ಯವಾಗಿ ಮಾತಾಡಿದ್ದಾನೆ.ಮಂಚಕ್ಕೆ ಕರೆದಿದ್ದಾನೆ ಎನ್ನಲಾಗಿದೆ.