ಸೌದಿ ಅರೇಬಿಯಾದಲ್ಲಿ ಮಹಿಳೆಯರು ವಾಹನ ಚಾಲನೆ ಮಾಡುವಂತಿಲ್ಲ ಎಂಬ ನಿಯಮವನ್ನು ತೆಗೆದು ಹಾಕಿರುವುದು ನಿಮಗೆ ಈಗಾಗಲೇ ಗೊತ್ತಿದೆ. ದಶಕದಿಂದ ಇಲ್ಲಿ ಮಹಿಳೆಯರು ಡ್ರೈವಿಂಗ್ ಮಾಡುವುದನ್ನು ನಿಷೇಧಿಸಲಾಗಿತ್ತು. ಡ್ರೈವಿಂಗ್ ಬ್ಯಾನ್ ಮುಕ್ತಿ ಸಿಗುತ್ತಿದ್ದಂತೆ ಸೌದಿಯಲ್ಲಿ ಮಹಿಳೆಯರು ಸಂಭ್ರಮಿಸುತ್ತಿದ್ದಾರೆ.
ಡ್ರೈವಿಂಗ್ ನಿಷೇಧ ವಾಪಸ್ಸು ಪಡೆದ ದಿನವನ್ನು ಅಸೀಲ್ ಅಲ್ ಅಹಮ್ಮದ್ ಎಂಬಾಕೆ ಫಾರ್ಮುಲಾ ಒನ್ ಓಡಿಸುವ ಮೂಲಕ ವಿಭಿನ್ನವಾಗಿ ಸಂಭ್ರಮಿಸಿದ್ದಾರೆ
ಅಸೀಲ್ ಅಲ್ ಅಹಮ್ಮದ್ ಸೌದಿ ಅರೇಬಿಯಾದ ಮೋಟರ್ ಸ್ಪೋರ್ಟ್ಸ್ ಫೆಡರೇಶನ್ ನ ಮೊದಲ ಮಹಿಳಾ ಎಫ್ 1 ರೇಸರ್ ಆಗಿದ್ದಾರೆ.