ವಿಜಯ್ ಗುಟ್ಟೆ ನಿರ್ದೇಶನದ ‘ದಿ ಅಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.
ನಟ ಅನುಪಮ್ ಖೇರ್ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಂತೆಯೇ ಕಾಣಿಸಿಕೊಂಡಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಾತ್ರದಲ್ಲಿ ನಟ ಅರ್ಜುನ್ ಮಾಥುರ್ ಹಾಗೂ ಪ್ರೀಯಾಂಕ ಗಾಂಧಿ ಪಾತ್ರದಲ್ಲಿ ನಟಿ ಅಹನಾ ಕುಮಾರ ಅಭಿನಯಿಸುತ್ತಿದ್ದಾರೆ.
ಸುಜಾನಾ ಬರ್ನೆಟ್ ಸೋನಿಯಾ ಗಾಂಧಿ ಪಾತ್ರದಲ್ಲಿ, ಅಕ್ಷಯ್ ಖನ್ನಾ ಸಂಜಯ್ ಬಾರು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.
ಡಾ.ಮನಮೋಹನ್ ಸಿಂಗ್ ಅವರ ಸಲಹೆಗಾರ ಸಂಜಯ್ ಬಾರು ಅವರು ಬರೆದ ಜೀವನ ಚರಿತ್ರೆ ಆಧರಿಸಿ ಚಿತ್ರ ಮಾಡಲಾಗುತ್ತಿದೆ.