ವರ ಮಿಂಚಿಗೆ ಹೆದರಿ ವಿಚಿತ್ರವಾಗಿ ನಡೆದುಕೊಂಡಿದ್ದಕ್ಕೆ ವಧು ಮದುವೆ ಬೇಡ ಎಂದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ವರ ಮಿಂಚಿಗೆ ಹೆದರಿದ್ದಕ್ಕೆ ವಧು ಮದುವೆ ನಿರಾಕರಿಸಿದ್ದಾಳೆ. ಇದರಿಂದ ಇಬ್ಬರ ಕುಟುಂಬದ ನಡುವೆ ಗಲಾಟೆಯಾಗಿದೆ. ಮದುವೆ ಶಾಸ್ತ್ರಗಳು ಮುಗಿದ ಬಳಿಕ ವಧು ಮದುವೆ ಮುರಿದಿದ್ದಾಳೆ…!
ಇದರಿಂದ ವರನ ಕುಟುಂಬದವರು ವಧುವಿನ ಕುಟುಂಬದ ಮೇಲೆ ಆಕ್ರೋಶಗೊಂಡು ಹಲ್ಲೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವರನ ಕುಟುಂಬದ ಮೂವರು ಸದಸ್ಯರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.