No menu items!
21.7 C
Munich
Wednesday, July 8, 2026

ಮುಚ್ಚುವ ಭೀತಿಯಲ್ಲಿ ಕಿಮ್ಸ್ ಕಾಲೇಜ್…!?

Must read

ಬೆಂಗಳೂರಿನ ಪ್ರತಿಷ್ಠಿತ ಕಿಮ್ಸ್ ಕಾಲೇಜ್ ಇದೀಗ ಮುಚ್ಚುವ ಭೀತಿ ಎದುರಿಸುತ್ತಿದೆ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯ ‘ನಿಮ್ಮ ಕಾಲೇಜನ್ನು ಮುಚ್ಚ ಬಾರದೇಕೆ?’ ಎಂದು ಕಿಮ್ಸ್ ಕಾಲೇಜಿಗೆ ನೋಟೀಸ್ ನೀಡಿದ್ದು…ಉತ್ತರಿಸುವಂತೆ ತಾಕೀತು ಮಾಡಿದೆ.
ಒಕ್ಕಲಿಗರ ಸಂಘದ ನಿರ್ದೇಶಕ ಕೃಷ್ಣಮೂರ್ತಿ ಮೆಡಿಕಲ್ ಸೀಟ್ ಕೊಡಿಸೋದಾಗಿ ಲಕ್ಷಾಂತರ ರೂ ಹಣ ಪಡೆದು ವಂಚನೆ ಮಾಡಿದ್ದಾರೆ.

ಹಾಗಾಗಿ ಆ ಕಾಲೇಜಿನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಜ್ಯೋತಿ ಜಯಕುಮಾರ್ ಎಂಬುವವರು ಎಂಸಿಐಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಎಂಸಿಐ ನೋಟೀಸ್ ಜಾರಿ ಮಾಡಿದೆ.
ಮೆಡಿಕಲ್ ಸೀಟಿಗೂ ಕೃಷ್ಣಮೂರ್ತಿಗೂ ಯಾವುದೇ ಸಂಬಂಧವಿಲ್ಲ. ನಮ್ಮ ಕಾಲೇಜ್ ನೀಟ್ ಮುಖಾಂತರ ಬರುವ ವಿದ್ಯಾರ್ಥಿಗಳಿಗೆ ಮಾತ್ರ ಸೀಟ್ ನೀಡುತ್ತಿದ್ದೇವೆ. ಹಣ ಕಳೆದುಕೊಂಡವರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಿ. ಎಂಸಿಐ ನೋಟಿಸ್ ಗೆ ಉತ್ತರಿಸಿದ್ದೇವೆ ಎಂದು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ. ನಾಗರಾಜ್ ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article